ಬೆಂಗಳೂರು: ರಾಜ್ಯದಲ್ಲಿ ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪಿಸುವ ಚಿಂತನೆ ನಡೆದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ರೀತಿಯ ಸುದ್ದಿ ಕಾಂಗ್ರೆಸ್ ಸೃಷ್ಟಿಸಿರುವ ವದಂತಿ ಎಂದು ಹೇಳಿದೆ.
ಈ ಕುರಿತಂತೆ ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರ ಹೇಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನ ಟೂಲ್‌ಕಿಟ್ ಸುದ್ದಿಗಳೂ ಆರಂಭವಾಗಿದೆ. ಅದರಲ್ಲೊಂದು ಈ ಮುಸ್ಲಿಂ ಕಾಲೇಜು ಸುದ್ದಿ ಎಂದು ಹೇಳಿದೆ.
ಸ್ಪಷ್ಟವಾಗುವ ಸಂಗತಿಗಳು ಎರಡು : ಸರ್ಕಾರದಿಂದ ಈ ಬಗ್ಗೆ ಯಾವುದೇ ಪ್ರಸ್ತಾಪವೂ ಇಲ್ಲ, ಕಾಂಗ್ರೆಸ್‌ಗೆ ಕೆಲಸವೂ ಇಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನ ಟೂಲ್‌ಕಿಟ್ ಸುದ್ದಿಗಳೂ ಆರಂಭವಾಗಿದೆ. ಅದರಲ್ಲೊಂದು ಈ ಮುಸ್ಲಿಂ ಕಾಲೇಜು ಸುದ್ದಿ.
ಸ್ಪಷ್ಟವಾಗುವ ಸಂಗತಿಗಳು ಎರಡು : ಸರ್ಕಾರದಿಂದ ಈ ಬಗ್ಗೆ ಯಾವುದೇ ಪ್ರಸ್ತಾಪವೂ ಇಲ್ಲ, ಕಾಂಗ್ರೆಸ್‌ಗೆ ಕೆಲಸವೂ ಇಲ್ಲ.#ಹಿಂದೂವಿರೋಧಿಕಾಂಗ್ರೆಸ್#AntiHinduCongress pic.twitter.com/VjcJCqr8Sv
— BJP Karnataka (@BJP4Karnataka) December 1, 2022



















































