ಜೈಪುರ: ಸ್ಪಷ್ಟ ಗುರಿ, ಪ್ರಯತ್ನ ಮತ್ತು ಛಲ ಇದ್ದರೆ ಯಾವ ಕಾರ್ಯವೂ ಅಸಾಧ್ಯವಲ್ಲ ಎಂಬುದಕ್ಕೆ ಈ ಯುವತಿ ಮತ್ತೊಂದು ಉದಾಹರಣೆ.
ರಾಜಸ್ಥಾನದ ಅತಿ ಹಿಂದುಳಿದ ವಾಲ್ಮೀಕಿ ಜನಾಂಗದ ಆಶಾ ಕಂಡಾರ ಯುವತಿ ಇದೀಗ ಆ ರಾಜ್ಯದಲ್ಲಿ ಅಪರೂಪದ ಸಾಧಕಿ. ಜೋಧಪುರ್ ಮುನ್ಸಿಪಾಲಿಟಿಯ ಪೌರ ಕಾರ್ಮಿಕೆಯಾಗಿ ಕೆಲಸ ಮಾಡುತ್ತಿದ್ದ ಎರಡು ಮಕ್ಕಳ (singal parent) ತಾಯಿ ಈ ಆಶಾ ಕಂಡಾರ ತನ್ನ ಸತತ ಪ್ರಯತ್ನದಿಂದ ರಾಜಸ್ಥಾನ ಆಡಳಿತಾತ್ಮಕ ಸೇವೆಯ ಪರೀಕ್ಷೆ ಬರೆದು ತೇರ್ಗಡೆಗೊಂಡಿದ್ದಾರೆ.
ಈಕೆಯ ಸಾದನೆ ಕರ್ನಾಟಕ ಸಹಿತ ಇಡೀ ರಾಷ್ರದಲ್ಲಿ ಪ್ರತಿಬಿಂಬಿಸಿದೆ. ಇದಕ್ಕೆ ಕಾರಣವಾದದ್ದು ಬಿಜಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ರಾಜಸ್ಥಾನ ಪ್ರವಾಸ.
ಬಿಜೆಪಿ ಪಕ್ಷದಲ್ಲಿ ಇತ್ತೀಚಿನ ವರ್ಷದಲ್ಲಿ ಪ್ರಧಾನ ಕಾರ್ಯದರ್ಶಿಗಳು ಹೆಚ್ಚುವರಿ ರಾಜ್ಯಗಳಿಗೆ ಸಂಘಟನಾತ್ಮಕ ಪ್ರವಾಸ ಕೈಗೊಳ್ಳವೇಕೆಂಬ ಸೂತ್ರವನ್ನು ಅನುಸರಿಸಲಾಗುತ್ತಿದೆ. ಅದರಂತೆ ರಾಜಸ್ಥಾನ ಸವಾರಿ ಕೈಗೊಂಡಿರುವ ಸಿ.ಟಿ.ರವಿ ಜೈಪುರಕ್ಕೆ ತೆರಳಿದಾಗ ಅಚ್ಚರಿಯ ಸಂಗತಿಯೊಂದು ಅವರಿಗೆ ಗೊತ್ತಾಯಿತು. ಪೌರ ಕಾರ್ಮಿಕೆಯೊಬ್ಬಳು ನಾಗರಿಕ ಸೇವಾ ಪರೀಕ್ಷೆ ಬರೆದು ಸಾಧಕಿಯಾಗಿರುವ ವಿಚಾರ ತಿಳಿದ ರವಿ ಮಂಗಳವಾರ ಆಕೆಯ ಮನೆಗೆ ತೆರಳಿ ಮಾತನಾಡಿ ಅಚ್ಚರಿಗೂ ಕಾರಣರಾದರು.
ಅವರು ಭೇಟಿಯಾದ ಮಾತ್ರಕ್ಕೆ ಇದು ಸುದ್ದಿಯಾಗಿರಲಿಲ್ಲ. ಭೇಟಿ ಸಂದರ್ಭದಲ್ಲಿ ಅವರ ಜೊತೆಗೆ ಸಾವಿರಾರು ಜನ ಧಾವಿಸಿ ಬಂದಾಗ ಸೃಷ್ಟಿಯಾದ ಆ ಸನ್ನಿವೇಶ ಮಾಧ್ಯಮ ಪ್ರತಿನಿಧಿಗಳ ಚಿತ್ತ ಸೆಳೆಯಲು ಕಾರಣವಾಯಿತು. ಪೌರ ಕಾರ್ಮಿಕಳಾಗಿದ್ದವಳನ್ನು ರವಿ ಭೇಟಿಯಾಗಿ ‘ತಾವು ಇಡೀ ದೇಶದ ಯುವಜನರಿಗೆ ಸ್ಫೂರ್ತಿಯಾಗಬೇಕು’ ಎಂದು ಮಾಡಿದ ಮಾರ್ಗದರ್ಶನದ ಪ್ರಸಂಗ ರಾಜಸ್ಥಾನದ ಇತಿಹಾಸದಲ್ಲೇ ಅಪೂರ್ವ ಎಂಬಂತಿತ್ತು.
ಈ ಕುರಿತಂತೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಇಂತಹ ಸಾಧಕಿಯನ್ನು ಭೇಟಿಮಾಡುವ ಅವಕಾಶ ಸಿಕ್ಕಿರುವುದೂ ನನ್ನ ಸೌಭಾಗ್ಯ ಎಂದರು. ಈ ಸಹೋದರಿ ಆಶಾ ತಾನು ಕ್ರಮಿಸಿದ ದಾರಿಯ ಕುರಿತು, ತನ್ನೊಂದಿಗೆ ಹೇಳಿಕೊಂಡ ಕುತೂಹಲಕಾರಿ ಸಂಗತಿಗಳನ್ನು ರವಿ ಮಾಧ್ಯಗಳೊಂದಿಗೆ ಹಂಚಿಕೊಂಡರು.
ಪೌರಕಾರ್ಮಿಕೆಯಾಗಿ ತಾನು ಹೋದಲೆಲ್ಲಾ ‘ನೀನು ಯಾರು ಕಲೆಕ್ಟರಾ?’ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದರು. ಏನಿದು ಕಲೆಕ್ಟರ್ ಎಂಬ ಪ್ರಶ್ನೆ ತನ್ನಲ್ಲಿ ಮೂಡಿ, ಅದೇನು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ ಕಲೆಕ್ಟರ್ ಆಗಲು ಬೇಕಾದ ಅರ್ಹತೆಗಳ ಕುರಿತು ತಿಳಿದುಕೊಂಡೆ. ಆ ಗುರಿಯನ್ನು ಸಾಧಿಸಲು ಹೆಜ್ಜೆಯಿಟ್ಟೆ. ಅದರ ಫಲಸ್ವರೂಪ ಇಲ್ಲಿಗೆ ತಲುಪಿದ್ದೇನೆ ಎಂದು ಹೇಳಿದ ಧಾಟಿಯಲ್ಲಿ ಆಕೆಯ ದೃಢ ಸಂಕಲ್ಪ ಕಾಣುತ್ತಿತ್ತು ಎಂದು ರವಿ ಬಣ್ಣಿಸಿದ್ದಾರೆ.
ಆಶಾ ಕಂಡಾರ ಚಿಕ್ಕವಯಸ್ಸಿನಲ್ಲಿ ಮದುವೆಯಾಗಿ, ಎರಡು ಮಕ್ಕಳ ತಾಯಿಯಾಗಿ ಗಂಡನಿಂದ ದೂರವಾಗಿದ್ದರೂ ಸಂಸಾರದ ತನ್ನ ಜವಾಬ್ದಾರಿ ನಿರ್ವಹಿಸುತ್ತಾ, ಮಕ್ಕಳ, ಒಡಹುಟ್ಟಿದವರ ಜವಾಬ್ದಾರಿ ನಿರ್ವಹಣೆಗೆ ಪೌರ ಕಾರ್ಮಿಕೆಯಾಗಿ ಕೆಲಸ ನಿರ್ವಹಿಸುತ್ತಲೆ ಇಂದು ಆ ರಾಜ್ಯದ ಅಧಿಕಾರಿಣಿಯಾಗಿದ್ದಾರೆ ಎಂದು ಅವರ ಸಾಧನೆಯನ್ನು ಪ್ರಶಂಸಿಸಿದ್ದಾರೆ.
ರಾಜಸ್ಥಾನದ ಜೋಧಪುರದ ನಿವಾಸಿಯಾಗಿರುವ ಆಶಾ ಕಂಡಾರ ಅವರ ಸ್ವಗೃಹಕ್ಕೆ ರಾಜಸ್ಥಾನ ಬಿಜೆಪಿ ಪಧಾದಿಕಾರಿಗಳೊಂದಿಗೆ, ಕಾರ್ಯಕರ್ತರೊಂದಿಗೆ ತೆರಳಿ ಅವರನ್ನು ಅಭಿನಂದಿಸಿ ಅವರ ಮುಂದಿನ ಭವಿಷ್ಯಕ್ಕೆ ಶುಭಕೋರಿದ ಸಿ.ಟಿ.ರವಿ, ಇಂತಹ ಅಸೀಮ ಶಕ್ತಿ ಹಾಗೂ ದೃಢತೆ ಇರುವ ಶಕ್ತಿ ಸ್ವರೂಪಿಣಿ ಮಾತೆಯರು ನಮಗೆ ಮಾದರಿ ಎಂದು ಗುಣಗಾನ ಮಾಡಿದ್ದಾರೆ.