ಅಂದು ಬಂಗಾಳದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸೂರ್ಯ.. ಇದೀಗ ತವರಿನಲ್ಲೂ ತೇಜಸ್ಸು.. ಇದೀಗ ಮುಂದಿನ ಸಿಎಂ ಎನ್ನುವವರೆಗೂ ವರ್ಚಸ್ಸು..
ಬೆಂಗಳೂರು: ಕೋವಿಡ್ ಸೋಂಕಿತರ ಮಾರಣ ಹೋಮವನ್ನು ತಡೆಯಲು ಸೇನಾನಿಯಾಗಿ ಅಖಾಡಕ್ಕೆ ಧುಮುಕಿರುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಯುವಜನ ಸಮೂಹ ಈ ಯುವ ಸಂಸದನನ್ನು ನ್ಯಾಷನಲ್ ಹೀರೋ ಎಂಬಂತೆ ಬಿಂಬಿಸುತ್ತಿದೆ.
ಮಂಗಳವಾರ ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ಖದೀಮರ ಕೃತ್ಯವನ್ನು ಬಯಲು ಮಾಡಿದ್ದ ಸಂಸದ ತೇಜಸ್ವಿ ಸೂರ್ಯ, ಇಂದು ರಾಜಕಾರಣಿಯಾಗಿ ಕೆಲಸ ಮಾಡುವ ಬದಲು ಕೊರೋನಾ ಸೇನಾನಿಯಾಗಿ ಗಮನಸೆಳೆದರು. ಬಿಬಿಎಂಪಿ ಅಧಿಕಾರಿಗಳನ್ನು ಭೇಟಿಯಾಗಿ ಕೋವಿಡ್ ಸೋಂಕಿತರಿಗೆ ಬೆಡ್‌ಗಳ ಕೊರತಯಾಗದಂತೆ ಕ್ರಮಕೈಗೊಳ್ಳುವಂತೆ ಮನವಿ ಮಾಡುತತಿದ್ದ ವೈಖರಿ ಗಮನಸೆಳೆಯಿತು.
ಈ ನಡುವೆ ಬಿಬಿಎಂಪಿ ವತಿಯಿಂದ ಬೆಡ್ ಹಂಚಿಕೆಗಾಗಿ ಬಳಕೆ ಮಾಡುತ್ತಿದ್ದ ಸಾಫ್ಟ್ ವೇರ್ ವ್ಯವಸ್ಥೆ ಸರಿಪಡಿಸಲು ತೇಜಸ್ವಿ ವಹಿಸಿದ ಕಾಳಜಿ ಅಧಿಕಾರಿಗಳ ವಲಯದಲ್ಲೂ ಶ್ಲಾಘನೀಯವೆನಿಸಿದೆ. ತೇಜಸ್ವಿ ಸೂರ್ಯ ಅವರ ಪ್ರಯತ್ನದಲ್ಲಿ ನಂದನ್ ನಿಲೇಕಣಿ ಅವರ ಸಹಭಾಗಿತ್ವವೂ ಎಲ್ಲರ ಕುತೂಹಲದ ಕೇಂದ್ರಬಿಂದುವಾಯಿತು.
ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, “ಇಂದು ಬೆಳಿಗ್ಗೆ ನಂದನ್ ನಿಲೇಕಣಿ ಅವರೊಂದಿಗೆ ಮಾತನಾಡಿ ಬಿಬಿಎಂಪಿ ಬೆಡ್ ಹಂಚಿಕೆಗೆ ಸಂಬಂಧಿಸಿದಂತೆ ಸಾಫ್ಟ್‌ವೇರನ್ನು ಮರುವಿನ್ಯಾಸಗೊಳಿಸಲು ತಾಂತ್ರಿಕ ಸಹಕಾರ ಒದಗಿಸುವಂತೆ ಮನವಿ ಮಾಡಿದ್ದು, ಪರಿಣಿತರ ತಂಡವನ್ನು ಇದಕ್ಕೊಸ್ಕರವೇ ಸಜ್ಜುಗೊಳಿಸಿರುವುದು ಶ್ಲಾಘನೀಯ. ನಂದನ್ ನಿಲೇಕಣಿ ರವರ ಜನಪರ ಕಾಳಜಿ,ಬದ್ಧತೆ ಅಭಿನಂದನಾರ್ಹ ಎಂದು ಬರೆದುಕೊಂಡಿದ್ದಾರೆ.
ಇಂದು ಬೆಳಿಗ್ಗೆ ಶ್ರೀ@NandanNilekani ರೊಂದಿಗೆ ಮಾತನಾಡಿ ಬಿಬಿಎಂಪಿ ಬೆಡ್ ಹಂಚಿಕೆಗೆ ಸಂಬಂಧಿಸಿದಂತೆ ಸಾಫ್ಟ್ ವೇರ್ ಅನ್ನು ಮರುವಿನ್ಯಾಸಗೊಳಿಸಲು ತಾಂತ್ರಿಕ ಸಹಕಾರ ಒದಗಿಸುವಂತೆ ಮನವಿ ಮಾಡಿದ್ದು, ಪರಿಣಿತರ ತಂಡವನ್ನು ಇದಕ್ಕೊಸ್ಕರವೇ ಸಜ್ಜುಗೊಳಿಸಿರುವುದು ಶ್ಲಾಘನೀಯ.
ಶ್ರೀ ನಂದನ್ ನಿಲೇಕಣಿ ರವರ ಜನಪರ ಕಾಳಜಿ,ಬದ್ಧತೆ ಅಭಿನಂದನಾರ್ಹ.
— Tejasvi Surya (ಮೋದಿಯ ಪರಿವಾರ) (@Tejasvi_Surya) May 5, 2021