ದೆಹಲಿ: ಮುಸ್ಲಿಮರ ಪವಿತ್ರ ಶ್ರದ್ದಾಕೇಂದ್ರ ಅಜ್ಮೀರ್ ದರ್ಗಾಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾದರ್ ಸಮರ್ಪಿಸಿದ್ದಾರೆ.
ಖ್ಯಾತ ಸೂಫಿ ಸಂತ ಖ್ವಾಜ ಮುಈನುದ್ದೀನ್ ಚಿಶ್ತಿ ಅವರ 811ನೇ ಉರೂಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಜ್ಮೀರ್ ದರ್ಗಾಕ್ಕೆ ‘ಚಾದರ್’ ಕಳುಹಿಸಿಕೊಟ್ಟಿದ್ದು, ಅದನ್ಬು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಬುಧವಾರ ಅಜ್ಮೀರ್ ದರ್ಗಾಕ್ಕೆ ಅರ್ಪಿಸಿದರು.
ಜಿಶ್ತಿ ಅವರ 811ನೇ ಉರೂಸ್ ಅಂಗವಾಗಿ ಮುಸ್ಲಿಂ ಸನುದಾಯಕ್ಕೆ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಖ್ವಾಜ ಮುಈನುದ್ದೀನ್ ಚಿಶ್ತಿ ಅವರು ಭಾರತ ಶ್ರೇಷ್ಠ ಧಾರ್ಮಿಕ ಪರಂಪರೆಯ ಗುರುತಾಗಿದ್ದು. ಮಾನುಕುಲಕ್ಕೆ ಅವರು ಮಾಡಿರುವ ಸೇವೆ ಮುಂದಿನ ಪೀಳಿಗೆಗೂ ಮಾದರಿಯಾದುದು ಎಂದು ಹೊಗಳಿದ್ದಾರೆ.