ಬೆಂಗಳೂರು: ರಾಜ್ಯ ಸರ್ಕಾರ ಕೈಗೊಂಡಿರುವ ಜಾತಿ ಸಮೀಕ್ಷೆ ರಾಜಕೀಯ ಪಕ್ಷಗಳ ಜಂಘಿಕುಸ್ತಿಗೆ ಕಾರಣಾವಾಗಿದೆ. ಇದೀಗ ಈ ಜಟಾಪಟಿ ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದೆ. ಕರ್ನಾಟಕ ಸರ್ಕಾರದ ಒಬಿಸಿ ಸಮೀಕ್ಷೆಯನ್ನು ವಿರೋಧಿಸಿದ್ದಕ್ಕಾಗಿ ಮತ್ತು ಒಬಿಸಿ ಮೀಸಲಾತಿ ಬಗ್ಗೆ ಬಿಜೆಪಿಯ ಸ್ಪಷ್ಟ ನಿಲುವನ್ನು ಸ್ಪಷ್ಟಪಡಿಸಲು ಕೋರಿ ಕಾಂಗ್ರೆಸ್ ಶಾಸಕ ರಮೇಶ್ ಬಾಬು ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಬೆಂಗಳೂರು ದಕ್ಷಿಣ ಸಂಸದ ಶ್ರೀ ತೇಜಸ್ವಿ ಸೂರ್ಯ ಅವರ ನಡೆ ಬಗ್ಗೆ ಈ ಪತ್ರದಲ್ಲಿ ರಮೇಶ್ ಬಾಬು ಆಕ್ರೋಶ ಹೊರಹಾಕಿದ್ದಾರೆ.
ಸಾಮಾಜಿಕ ನ್ಯಾಯ, ಸಮಾನ ಪ್ರಾತಿನಿಧ್ಯ ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸಾಂವಿಧಾನಿಕ ನಿಬಂಧನೆಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ಅನುಗುಣವಾಗಿ ಕರ್ನಾಟಕದಲ್ಲಿ ಒಬಿಸಿ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಕಲ್ಯಾಣ ನೀತಿಗಳನ್ನು ರೂಪಿಸಲು ಮತ್ತು ಮೀಸಲಾತಿ ವ್ಯವಸ್ಥೆಯನ್ನು ರಕ್ಷಿಸಲು ಅಗತ್ಯವಾದ ಒಬಿಸಿ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯ ಬಗ್ಗೆ ನಿಖರವಾದ ಡೇಟಾವನ್ನು ಒದಗಿಸಲು ಸಮೀಕ್ಷೆಯು ಪ್ರಯತ್ನಿಸುತ್ತದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರೂ ಆದ ರಮೇಶ್ ಬಾಬು ಬಿಜೆಪಿ ಹೈಕಮಾಂಡಿನ ಗಮನಸೆಳೆದಿದ್ದಾರೆ.
ಆದಾಗ್ಯೂ, ಜೋಶಿ ಮತ್ತು ಸೂರ್ಯ ನೀಡಿರುವ ಹೇಳಿಕೆಗಳು ಈ ಸಾಂವಿಧಾನಿಕ ಪ್ರಕ್ರಿಯೆಯನ್ನು ವಿರೋಧಿಸಿದಂತಿದೆ. ಸಮೀಕ್ಷೆಯನ್ನು ಹಿಂದುಳಿದ ವರ್ಗಗಳು ಮತ್ತು ಮೀಸಲಾತಿಯ ವಿರುದ್ಧದ ‘ಪಿತೂರಿ’ ಎಂಬಂತೆ ಬಿಂಬಿಸುವ ಪ್ರಯತ್ನದಂತಿದೆ.
ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳನ್ನು ಮೇಲಕ್ಕೆತ್ತುವ ಸಾಂವಿಧಾನಿಕ ಆದೇಶವನ್ನು ದುರ್ಬಲಗೊಳಿಸುವ, ಒಬಿಸಿ ಸಮುದಾಯಗಳಲ್ಲಿ ಗೊಂದಲ ಮತ್ತು ವಿಭಜನೆಯನ್ನು ಸೃಷ್ಟಿಸುವ, ಮೀಸಲಾತಿಯನ್ನು ರಕ್ಷಿಸಲು ಮತ್ತು ಹಿಂದುಳಿದ ವರ್ಗಗಳಿಗೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಅಡ್ಡಿಯಾಗುವ ರೀತಿಯಲ್ಲಿ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಲಾಗಿದೆ.
ಹಿಂದುಳಿದ ವರ್ಗಗಳ ಹಕ್ಕುಗಳನ್ನು ರಕ್ಷಿಸಲು ಉದ್ದೇಶಿಸಲಾದ ಕಾನೂನುಬದ್ಧ, ಸಾಂವಿಧಾನಿಕ ಕ್ರಮಗಳನ್ನು ವಿರೋಧಿಸುವುದು ಕಳವಳಕಾರಿ ಎಂದಿರುವ ರಮೇಶ್ ಬಾಬು, ಬಿಜೆಪಿಯ ಹಿರಿಯ ನಾಯಕರ ಅನುಚಿತ ಹೇಳಿಕೆಗಳು ಒಬಿಸಿ ಸಮುದಾಯಗಳ ಬಗ್ಗೆ ಬಿಜೆಪಿಯ ಬದ್ಧತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುವಂತಿದೆ. ಒಬಿಸಿ ಹಕ್ಕುಗಳನ್ನು, ಮೀಸಲಾತಿಯ ಉದ್ದೇಶವನ್ನು ದುರ್ಬಲಗೊಳಿಸಿ, ಹಿಂದುಳಿದ ಸಮುದಾಯಗಳಲ್ಲಿ ವಿಭಜನೆ ಮತ್ತು ಗೊಂದಲವನ್ನು ಸೃಷ್ಟಿಸಲು ಈ ನಾಯಕರು ಪ್ರಯತ್ನಿಸಿರುವುದು ದುರಾದೃಷ್ಟಕರ ಎಂದವರು ಹೇಳಿದ್ದಾರೆ.
ಓಬಿಸಿ ವಿರೋಧಿ ನಿಲುವು ವ್ಯಕ್ತಪಡಿಸಿರುವ ಪ್ರಹ್ಲಾದ್ ಜೋಶಿ ಮತ್ತು ತೇಜಸ್ವಿ ಸೂರ್ಯ ಅವರ ವಿರುದ್ಧ ಬಿಜೆಪಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ರಮೇಶ್ ಬಾಬು, ಕರ್ನಾಟಕ ಒಬಿಸಿ ಸಮೀಕ್ಷೆಯ ಕುರಿತು ಪಕ್ಷವು ತನ್ನ ಅಧಿಕೃತ ನಿಲುವನ್ನು ತಕ್ಷಣವೇ ಸ್ಪಷ್ಟಪಡಿಸಬೇಕಿದೆ. ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ಸಾಂವಿಧಾನಿಕ ಹಕ್ಕುಗಳಿಗೆ ಎಂದಿಗೂ ಧಕ್ಕೆಯಾಗುವುದಿಲ್ಲ ಎಂದು ಭರವಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಒಬಿಸಿಗಳು ಸಮಾಜ ಮತ್ತು ರಾಜಕೀಯದ ಬೆನ್ನೆಲುಬು. ಈ ವಿಷಯದ ಬಗ್ಗೆ ಮೌನವಾಗಿರುವುದನ್ನು ಗಮನಿಸಿದರೆ, ಬಿಜೆಪಿಯು ಆ ಸಮುದಾಯಗಳಿಂದ ಅಂತರ ಕಾಯ್ದುಕೊಂಡಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕುತ್ತಿದೆ ಎಂದು ತಮ್ಮ ಮೊನಚು ಪದಗಳಿಂದ ತಿವಿದಿರುವ ನ್ಯಾಯದ ರಮೇಶ್ ಬಾಬು, ಹಿಂದುಳಿದ ವರ್ಗಗಳ ಜನರ ಹಿತಾಸಕ್ತಿ ಇದೆಯೆಂದಾದರೆ, ಒಬಿಸಿ ಮೀಸಲಾತಿ ಬಗ್ಗೆ ಬಿಜೆಪಿಯು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು