ಚಾಮರಾಜನಗರ: ಹನೂರು ತಾಲೂಕಿನ ರಾಮನಗುಡ್ಡ ಕೆರೆಗೆ ಕಾವೇರಿ ನದಿಯಿಂದ ನೀರು ಹರಿಸುವ ಉದ್ದೇಶದಿಂದ ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಗಳನ್ನು ದುರಸ್ತಿಗೊಳಿಸುವ ಕಾಮಗಾರಿಗೆ ಶಾಸಕ ಮಂಜುನಾಥ್ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಪ್ರತಿ ವರ್ಷದಂತೆ ಈ ಬಾರಿಯೂ ಹನೂರು ಕ್ಷೇತ್ರದಾದ್ಯಂತ ಮುಂಗಾರು ಮಳೆ ವಿಫಲವಾದ ಹಿನ್ನೆಲೆ ಹನೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ತಪ್ಪಿಸಲು ಕಾವೇರಿ ನದಿಯಿಂದ ರಾಮನಗುಡ್ಡ ಕೆರೆಗೆ ನೀರು ಹರಿಸಲಾಗುವುದು. ಆದ್ದರಿಂದ ನೀರು ಸರಾಗವಾಗಿ ಹರಿದು ಬರಲು ಸಂಪರ್ಕ ಕಾಲುವೆಗಳನ್ನು ಸ್ವಚ್ಛಗೊಳಿಸಲಾಗುವುದು. ಈ ಕಾರ್ಯಕ್ಕೆ ಸುತ್ತಮುತ್ತಲ ರೈತರು ಸಹಕಾರ ನೀಡಬೇಕು ಎಂದರು.
ಈ ಬಾರಿ ಮುಂಗಾರು ಮಳೆ ಕೊರತೆಯಿಂದಾಗಿ ಹನೂರು ಪಟ್ಟಣ ಸೇರಿದಂತೆ ರಾಮನಗುಡ್ಡ ಕೆರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಾಗೂ ವಿವಿಧ ಗ್ರಾಮಗಳಿಗೆ ನೀರಿನ ಸಮಸ್ಯೆ ತಲೆದೋರಿದೆ. ಕೆರೆಗಳಿಗೆ ನೀರು ತುಂಬಿಸಲು ಹೀಗಾಗಲೇ ಕಾವೇರಿ ನದಿಯಿಂದ ಪೈಪ್ಲೈನ್ ಅಳವಡಿಸಲಾಗಿದ್ದು ಒಂದು ಕಿಲೋಮೀಟರ್ ದೂರದಲ್ಲಿರುವ ಪೈಪ್ಲೈನ್ ತಳದಿಂದ ತಾತ್ಕಾಲಿಕವಾಗಿ ಕಾಲುವೆ ಮಾಡಿ 15 ದಿನಗಳ ಒಳಗೆ ನೀರನ್ನು ಕೆರೆಗೆ ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಲುವೆ ಕಾಮಗಾರಿ ರೈತರು ಸಹಕರಿಸಿ : ಮೂರು ಹಿಟಾಚಿ ಯಂತ್ರಗಳನ್ನು ಕಾಮಗಾರಿಗೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ರೈತರು ರಾಮನಗುಡ್ಡ ಕೆರೆಗೆ ನೀರು ಬರುವ ಮೂಲ ಕಾಲುವೆಯನ್ನು ತಾತ್ಕಾಲಿಕವಾಗಿ ರೈತರ ಜಮೀನುಗಳ ಬಳಿ ಗಿಡಗಂಟಿ ರಾಡಿಯನ್ನು ತೆಗೆಯಲಾಗುತ್ತಿದ್ದು, ರೈತರು ಜೊತೆಯಲ್ಲಿದ್ದು ಸಂಪೂರ್ಣ ಸಹಕಾರ ನೀಡಿದರೆ ಆದಷ್ಟು ಬೇಗ ನೀರನ್ನು ಹರಿಸಲು ಅನುಕೂಲವಾಗುತ್ತದೆ ಎಂದರು.
ಕೆರೆ ಒತ್ತುವರಿ ತೆರವಿಗೆ ಕ್ರಮ : ರಾಮನ ಗುಡ್ಡ ಕೆರೆ ನೀರಿನ ಮೂಲವಾಗಿದ್ದು 98 ಎಕರೆ ಸ್ಥಳ ಇರುವುದನ್ನು ನೀರಾವರಿ ಇಲಾಖೆ ಅಧಿಕಾರಿಗಳು ಗುರುತು ಮಾಡಿ ಬಂಡ್ ನಿರ್ಮಾಣ ಮಾಡಲಾಗುತ್ತದೆ ಹೀಗಾಗಿ ಅಧಿಕಾರಿಗಳಿಗೂ ಸಹ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಮಹತ್ವಾಕಾಂಕ್ಷೆಯ ನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳಲಾಗಿದ್ದು ಈ ಭಾಗದ ರೈತರು ಸದ್ಬಳಕೆ ಮಾಡಿಕೊಂಡು ರಾಮನ ಗುಡ್ಡ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲು ಈ ನಿಟ್ಟಿನಲ್ಲಿ ರೈತರು ಮುಂದಾಗಬೇಕು ಕೆರೆಯ ಸುತ್ತಲೂ ಸುಮಾರು ಎರಡು ಕಿಲೋಮೀಟರು ಕಾಲ್ನಡಿಗೆಯಲ್ಲಿ ರೈತರ ಜೊತೆ ನಡೆದು ಸಾಗಿ ನೀರು ಹರಿದು ಬರುವ ಸ್ಥಳಗಳನ್ನು ಪರಿಶೀಲಿಸಿ ರೈತರು ತಮ್ಮ ತಮ್ಮ ಜಮೀನುಗಳ ಪಕ್ಕದಲ್ಲಿ ಕಾಲುವೆ ಮೂಲಕ ಕೆರೆಗೆ ಹರಿದು ಹೋಗುವ ಜಾಗವನ್ನು ನೀವೇ ನಿಂತು ಹೂಳು ತೆಗಿಸಿಕೊಳ್ಳಿ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಮುಖಂಡರಾದ ಗುರುಮಲ್ಲಪ್ಪ, ರಾಜುನಾಯ್ಡು, ಡಿ ಆರ್ ಹಾರ್ಡ್ವೇರ್ ಸೀನನ್ನ, ರೈತ್ಯ ಮುಖಂಡರಾದ ಅಮ್ಜದ್ ಖಾನ್, ಮಾದಪ್ಪ, ಅಮೋಘ, ಮಲ್ಲಣ್ಣ, ವಿಜಯ್ ಕುಮಾರ್, ಧನರಾಜ್ ರಾಮನಗುಡ್ಡ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಉಪಸ್ಥಿತರಿದ್ದರು.