ಬೆಂಗಳೂರು: ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ದ ಸಂಪುಟ ಸಹೋದ್ಯೋಗಿಗಳೇ ಸಿಡಿದೆದ್ದಂತಿದೆ. ಬೆಂಗಳೂರಿನಲ್ಲಿಂದು ನಡೆದ ಸಚಿವ ಸಂಪುಟ ಹೈವೋಲ್ಟೇಜ್ ವಿದ್ಯಮಾನಕ್ಕೆ ಸಾಕ್ಷಿಯಾಯಿತು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿರುವಂತೆಯೇ ಸರ್ಕಾರದ ಸಂಪುಟದೊಳಗೂ ಎಲ್ಲವೂ ಸರಿ ಇಲ್ಲ ಎಂಬ ಸಂಗತಿಯನ್ನು ಸಚಿವ ಸಿಪಿ ಯೋಗೀಶ್ವರ್ ಇಂದು ಬಹಿರಂಗ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಎಂ ಕುಟುಂಬದ ಬಗ್ಗೆ ವಾಗ್ದಾಳಿ ನಡೆಸಿದ ಸಚಿವ ಯೋಗೇಶ್ವರ್, ತಮ್ಮ ಇಲಾಖೆಯ ವಿಷಯದಲ್ಲಿ ಬೇರೆಯವರು ಅಧಿಕಾರ ಚಲಾಯಿಸುವುದು ಸರಿಯಲ್ಲ ಎಂಬ ಸಂದೇಶವನ್ನು ರವಾನಿಸಿದರು. ನನ್ನ ಸಂಪುಟದ ವಿಷಯದಲ್ಲಿ ನನ್ನ ಮಗ ಅಧಿಕಾರ ಚಲಾಯಿಸಲು ನಾನು ಬಿಡಲ್ಲ. ಹಾಹಿರುವಾಗ ಬೆರೆಯವರು ನನ್ನ ಇಲಾಖೆಯಲ್ಲಿ ಅಧಿಕಾರ ಚಲಾಯಿಸುವುದು ಸರಿಯಲ್ಲ ಎಂದು ಯೋಗೇಶ್ವರ್ ಗುಡುಗಿದ ವೈಖರಿ ಕುತೂಹಲಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಯಿತು.
ಇದು ಮೂರು ಪಕ್ಷಗಳ ಸರ್ಕಾರ ಎಂಬಂತಾಗಿದೆ ಎಂಬ ಯೋಗೇಶ್ವರ್ ಅವರ ಹೇಳಿಕೆ ಕೂಡಾ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಈ ವಿಚಾರಗಳನ್ನು ಹೈಕಮಾಂಡ್‌ಗೆ ಹೇಳಲು ದೆಹಲಿಗೆ ತೆರಳಿದ್ದೆ. ಈ ಪ್ರಯತ್ನವನ್ನು ಮುಂದುವರಿಸುತ್ತೇನೆ ಎಂದವರು ಹೇಳಿದರು.