ಮಂಗಳೂರು: ಕರಾವಳಿ ಪ್ರವಾಸದ ವೇಳೆ ಆರೋಗ್ಯ ಸಚಿವ ಸುಧಾಕರ್ ಅವರು ಆಸ್ತಿಕರಲ್ಲಿ ಆಶಾವಾದ ಮೂಡಿಸುವ ಸನ್ನಿವೇಶಕ್ಕೆ ಸಾಕ್ಷಿಯಾದರು. ಉಡುಪಿ ಸಹಿತ ವಿವಿಧೆಡೆ ಬುಧವಾರ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವ ಡಾ.ಸುಧಾಕರ್, ದಕ್ಷಿಣ ಭಾರತದ ಪುರಾಣ ಪ್ರಸಿದ್ದ ಕಟೀಲು ದೇಗುಲಕ್ಕೂ ಭೇಟಿ ನೀಡಿ, ದೇವರ ದರ್ಶನ ಪಡೆದು ಪುನೀತರಾದರು.
ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಮಾತ್ರಕ್ಕೆ ಅವರು ಸುದ್ದಿಯಾಗುತ್ತಿರಲಿಲ್ಲ. ಅವರು ದಗುಲದ ವತಿಯಿಂದ ಗೌರವ ಹಾಗೂ ಪ್ರಸಾದ ಸ್ವೀಕರಿಸಿದ ನಡೆ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.
ಕೊರೋನಾ ಸೋಂಕು ತಡೆ ಉದ್ದೇಶದಿಂದ ಜಾರಿಯಲ್ಲಿದ್ದ ಕಠಿಣ ನಿಯಮಗಳು ಸಡಿಲಿಕೆಯಾಗಿದ್ದರೂ ದೇವಾಲಯಗಳಲ್ಲಿ ಪೂಜೆ, ಪುರಸ್ಕಾರ, ಪ್ರಸಾದ ವಿತರಣೆಯಂತಹಾ ಚಟುವಟಿಕೆಗಳಿಗೆ ನಿರ್ಬಂಧ ಇನ್ನೂ ಮುಂದುವರಿದಿದೆ. ಈ ನಿರ್ಬಂಧವನ್ನು ತೆರವುಗೊಳಿಸಬೇಕೆಂದು ಧಾರ್ಮಿಕ ವಲಯದಲ್ಲಿ ಒತ್ತಡಗಳು ಹೆಚ್ಚಾಗುತ್ತಿವೆ. ಆದರೆ ಸರ್ಕಾರ ಮಾತ್ರ ಇದ್ಯಾವುದಕ್ಕೂ ಕಿವಿಗೊಡಲಿಲ್ಲ. ಈ ನಡುವೆಯೇ ಸ್ವತಃ ಆರೋಗ್ಯ ಸಚಿವ ಸುಧಾಕರ್ ಅವರು ದೇವಾಲಯಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಕ್ಷೇತ್ರದ ಆಸ್ರಣ್ಣರಿಂದ ಪ್ರಸಾದ ಹಾಗೂ ಸನ್ಮಾನ ಸ್ವೀಕರಿಸಿ ಅಚ್ಚರಿಗೆ ಕಾರಣರಾದರು.
ಈ ಸನ್ನಿವೇಶ ಬಗ್ಗೆ ಕಟೀಲು ದೇಗುಲ ಪರಿಸರದಲ್ಲಿ ಬಗೆಬಗೆಯ ವಿಷ್ಲೇಷಣೆ ನಡೆದುದೆ. ಯಾರೊಬ್ಬರು ಕೂಡಾ ‘ಪ್ರಸಾದ ವಿಚಾರದಲ್ಲಿ ಸಚಿವರಿಗೊಂದು ನ್ಯಾಯ, ಸಾರ್ವಜನಿಕರಿಗೊಂದು ನ್ಯಾಯವೇ?’ ಎಂದು ಪ್ರಶ್ನಿಸಿಲ್ಲ. ಬದಲಾಗಿ, ಪೂಜೆ, ಹೋಮ, ಹವನಗಳನ್ನು ನೆರವೇರಿಸಲು ಆಸ್ತಿಕರಿಗೆಲ್ಲರಿಗೂ ಅವಕಾಶ ಕಲ್ಪಿಸುತ್ತಾರ ಎಂದು ಕಾದುನೋಡೋಣ ಎಂದು ಜನರು ಹೇಳಿಕೊಳ್ಳುತ್ತಿದ್ದರು.
https://youtu.be/Qvyh-UyS3_4
ಇದನ್ನೂ ಓದಿ.. ಭಕ್ತರ ಶಾಪಕ್ಕೆ ಗುರಿಯಾಗದಿರಿ.. ಅರ್ಚಕರ ಸಲಹೆ
ಅವೈಜ್ಞಾನಿಕ ನಿಯಮ?
ದೇವಾಲಯದಲ್ಲಿ ಪೂಜೆ, ಹೋಮ, ಹವನಗಳಿಗೆ ಅವಕಾಶ ನೀಡದಿರುವುದು ಸರಿಯಲ್ಲ ಎಂದು ಅರ್ಚಕರು ಹಾಗೂ ಧಾರ್ಮಿಕ ವಲಯದ ಪ್ರಮುಖರ ಅಭಿಪ್ರಾಯ. ತೀರ್ಥ ಪ್ರಸಾದ ವಿತರಣೆಯಿಂದ ಸೋಂಕು ಹರಡುತ್ತದೆ ಎಂಬುದೂ ತಪ್ಪು ಕಲ್ಪನೆ. ಅಷ್ಟೇ ಅಲ್ಲ, ಹೋಮ ಹವನಗಳಲ್ಲೂ ಜನಜಾತ್ರೆಯ ಸನ್ನಿವೇಶ ಸೃಷ್ಟಿಯಾಗುತ್ತದೆ ಎನ್ನುವುದೂ ಸರಿಯಲ್ಲ ಎಂಬುದು ದೇಗುಲಗಳ ಪ್ರಮುಖರ ಅಭಿಪ್ರಾಯ. ದೇವಾಲಯಗಳಲ್ಲಿ ನೆರವೇರುವ ಹೋಮ ಹವನಗಳಲ್ಲಿ ಆ ಪೂಜೆಗೆ ಸಂಬಂಧಿಸಿದ ಪರಿವಾರದವರಷ್ಟೇ ಪಾಲ್ಗೊಳ್ಳುವುದು. ಹಾಗಾಗಿ ಇಂತಹಾ ಕೈಂಕರ್ಯಕ್ಕೆ ನಿಯಮಗಳು ಅಡ್ಡಿಯಾಗಬಾರದು ಎನ್ನುತ್ತಿದ್ದಾರೆ ಧಾರ್ಮಿಕ ಪಂಡಿತರು.