ಮೈಸೂರು- ಭಾರತದ ಬಹಳ ಹಳೆಯ ರಾಜಕೀಯ ಪಕ್ಷವಾದ ಜನತಾ ಪಾರ್ಟಿ ಮುಂಚೂಣಿಗೆ ಬಂದಿದೆ. ಗಟ್ಟಿಯಾದ ಸಂಘಟನೆ ಮಾಡಲು ಪಕ್ಷದ ಮುಖಂಡರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.
ನೇಗಿಲು ಹೊತ್ತ ರೈತ ಚಿಹ್ನೆಯ ಜನತಾ ಪಾರ್ಟಿಯನ್ನು ಇಡೀ ರಾಷ್ಟ್ರದಲ್ಲಿ ಪುನರ್ ಸಂಘಟನೆ ಮಾಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ಬಂಧು ಕಾರ್ಯಕ್ರಮ ರೂಪಿದ್ದಾರೆ. ಹಾಗೆಯೇ ಪಕ್ಷ ಸಂಘಟನೆಗೆ ಭಾರತದ ಎಲ್ಲಾ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಮೈಸೂರಿನ ಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಆನಂದ್ ಅವರು, ಜನತಾ ಪಾರ್ಟಿಗೆ ಆಯ್ಕೆಯಾಗಿರುವ ಜಿಲ್ಲಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಇತರೆ ಪದಾಧಿಕಾರಿಗಳಿಗೆ ನೇಮಕ ಪತ್ರ ನೀಡಿದರು.
ಸುಮಲತಾ ಅವರು ಕೆ.ಆರ್.ಎಸ್ ಬಿರುಕು ಬಿಟ್ಟಿದೆ ಅಂತ ಒಂದೊಂದು ದಿನ ಒಂದೊಂದು ರೀತಿಯ ಹೇಳಿಕೆ ಕೊಟ್ಟು ಗೊಂದಲ ಮೂಡಿಸುತ್ತಿದ್ದಾರೆ. ತಮ್ಮ ರಾಜಕೀಯ ಬೆಳವಣಿಗೆಗೆ ಕೃಷ್ಣರಾಜ ಸಾಗರವನ್ನು ದಾಳವಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದು ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಆನಂದ್ ತಿಳಿಸಿದರು.
ಜನತಾ ಪಾರ್ಟಿಯನ್ನು ಮೊರಾರ್ಜಿ ದೇಸಾಯಿ ಹುಟ್ಟು ಹಾಕಿದ್ರು, ಅಂದಿನಿಂದ ಈ ತನಕ ಜನತಾ ಪಾರ್ಟಿ ಗಟ್ಟಿಯಾಗಿ ನಿಂತಿದೆ. ಅಂದು ನಮ್ಮ ಪಕ್ಷ ರಾಷ್ಟ್ರ ಮಟ್ಟದಲ್ಲಿ ಅಧಿಕಾರ ಹಿಡಿದಿತ್ತು. ಕೆಲವು ತೊಂದರೆಯಿಂದ ಮರೆಯಾಗಿದ್ದ ಪಾರ್ಟಿ ಈಗ ಮತ್ತೆ ಸಂಘಟನೆ ಮಾಡುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆ ಯಾರೇ ಅಧಿಕಾರ ಹಿಡಿಯಬೇಕಾದರೆ ಜನತಾ ಪಾರ್ಟಿಯ ಬೆಂಬಲ ಬೇಕೆ ಬೇಕಾಗುತ್ತೆ ಅಂತ ಪಕ್ಷದ ಜಿಲ್ಲಾಧ್ಯಕ್ಷ ರಾಮಕೃಷ್ಣ ತಿಳಿಸಿದರು.
ಜನತಾ ಪಾರ್ಟಿಯ ರಾಜ್ಯ ಮಹಿಳಾ ಅಧ್ಯಕ್ಷೆ ಭವ್ಯ ವಿಶ್ವನಾಥ್, ಕಾರ್ಯದರ್ಶಿ ಉಮಾ, ಅಲ್ಪ ಸಂಖ್ಯಾತ ರಾಫ್, ರಾಜ್ಯ ಕಾರ್ಯದರ್ಶಿ ರಫೀಕ್, ಮೈಸೂರು ಜಿಲ್ಲಾ ಕಾರ್ಯದರ್ಶಿ ಚಂದನ್ ಕುಮಾರ ಅಳ್ವಾಸ್, ಮೈಸೂರು ಮಹಿಳಾ ಅಧ್ಯಕ್ಷೆ ಉಮಾದೇವಿ, ಮೈಸೂರು ಜಿಲ್ಲೆಯ ಮಹಿಳಾ ಅದ್ಯಕ್ಷೆ ಟಿ. ಗಾಯತ್ರಿ ದೇವಿ ಮಾಧ್ಯಮ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು