ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರ ತಾಯಿ 95 ವರ್ಷದ ಸೀತಮ್ಮ ಅವರು ಮತದಾನ ಮಾಡುವ ಮೂಲಕ ಮಾದರಿಯಾದರು.
ಬಿಟಿಎಂ ಲೇಔಟ್ ನ ಮತಗಟ್ಟೆ ಸಂಖ್ಯೆ 202ರ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕೊಠಡಿ ಸಂಖ್ಯೆ 1ರಲ್ಲಿ ಮತದಾನ ಮಾಡಿದರು. ಇಳಿ ವಯಸ್ಸಿನಲ್ಲಿ ವೀಲ್ ಚೇರ್ ನಲ್ಲಿ ಆಗಮಿಸಿ ಮತದಾನ ಮಾಡಿದ ಸೀತಮ್ಮ ಅವರ ಉತ್ಸಾಹವನ್ನು ಕಂಡ ಚುನಾವಣಾ ಅಧಿಕಾರಿಗಳು ಮತ್ತು ಮತದಾರರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅವರು, ಇದುವರೆಗೂ ನಾನು ಎಲ್ಲಾ ಚುನಾವಣೆಗಳಲ್ಲಿ ಮತ ಚಲಾಯಿಸುತ್ತಾ ಬಂದಿದ್ದೇನೆ. ಮತದಾನ ನಮ್ಮ ಹಕ್ಕು ಮಾತ್ರವಲ್ಲ ಅದು ನಮ್ಮ ಜವಾಬ್ದಾರಿ ಎಂದರು.