ಹಾಸನ : ಈ ಬಾರಿಯ ವಿಧಾನಸಭಾ ಚುನಾವಣಾ ಅಖಾಡವೂ ಕೆಲವು ಅಹಿತಕರ ಘಟನೆಗಳಿಗೆ ಸಾಕ್ಷಿಯಾಯಿತು. ಹಾಸನದಲ್ಲಿಮತದಾನ ಮಾಡಿ ಹೊರ ಬಂದ ಬಳಿಕ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಚಿಕ್ಕೋಲೆ ಗ್ರಾಮದಲ್ಲಿ ಜಯಣ್ಣ (49) ಎಂವರು ಮತದಾನ ಮುಗಿ ಹೊರಟ ಸಂದರ್ಭದಲ್ಲಿ ಮತ ಕೇಂದ್ರದ ಆವರಣದಲ್ಲೇ ಹೃದಯಾಘಾತಕ್ಕೊಳಗಾದರು.
ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಯಿತಾದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.