ಬೆಂಗಳೂರು: ಸಚಿವ ಕಾರ್ಕಳ ಸುನಿಲ್ ಕುಮಾರ್ ಅವರು ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಅವರ ಆಸ್ತಿಯಲ್ಲಿ ದಿಢೀರ್ ಹೆಚ್ಚಳವಾಗಿದೆ ಎಂಬ ಸುದ್ದಿ ಪ್ರತಿಪಕ್ಷಗಳಿಗೆ ಆಹಾರವಾಗಿದೆ.
ಬಿಜೆಪಿ ಸರ್ಕಾರದ ಸಚಿವ ಕೆ.ಸುನಿಲ್ ಕುಮಾರ್ ಅವರು ಒಂದು ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ ಎಂಬುದು ಪ್ರತಿಪಕ್ಷ ಕಾಂಗ್ರೆಸ್‌ನ ಆರೋಪ. ಹಿಂದೂ ಸಂಘಟನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರ ಹೇಳಿಕೆಯನ್ನು ಮುಂದಿಟ್ಟು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಬಿಜೆಪಿಯ ಕರುಳು ಬಳ್ಳಿಯವರೇ ಆರೋಪಿಸಿದ್ದಾರೆ ಎಂದು ಬೊಟ್ಟು ಮಾಡಿದೆ.
ಅಬ್ಬೇಪಾರಿಯಾಗಿ ಅಲೆಯುತ್ತಿದ್ದ ಸಚಿವ ಸುನಿಲ್ ಕುಮಾರ್ ಈಗ 1000 ಕೋಟಿಯ ಒಡೆಯನಾಗಿದ್ದು ಹೇಗೆ? ಉದ್ಯೋಗ ಖಾತ್ರಿಯಲ್ಲಿ ಬೆವರು ಹರಿಸಿದ್ರಾ, ಅಡಿಕೆ ಮರ ಹತ್ತಿದ್ರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪ್ರಮೋದ್ ಮುತಾಲಿಕ್ ಅವರ ವೀಡಿಯೋವನ್ನು ಟ್ಯಾಗ್ ಮಾಡಿರುವ ಕಾಂಗ್ರೆಸ್, ಈ ಪ್ರಶ್ನೆಗೆ ಉತ್ತರಿಸುವ ಕನಿಷ್ಠ ಧೈರ್ಯವನ್ನು ಸುನಿಲ್ ಕುಮಾರ್ ಮತ್ತು ಬಿಜೆಪಿ ನಾಯಕರು ತೋರುವರೇ? ಎಂದು ತರಾಟೆಗೆ ತೆಗೆದುಕೊಂಡಿದೆ.
ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಬಿಜೆಪಿಯ ಕರುಳುಬಳ್ಳಿಯವರೇ ಆರೋಪಿಸಿದ್ದಾರೆ.
ಅಬ್ಬೇಪಾರಿಯಾಗಿ ಅಲೆಯುತ್ತಿದ್ದ ಸಚಿವ ಸುನಿಲ್ ಕುಮಾರ್ ಈಗ 1000 ಕೋಟಿಯ ಒಡೆಯನಾಗಿದ್ದು ಹೇಗೆ?
ಉದ್ಯೋಗ ಖಾತ್ರಿಯಲ್ಲಿ ಬೆವರು ಹರಿಸಿದ್ರಾ, ಅಡಿಕೆ ಮರ ಹತ್ತಿದ್ರಾ?ಈ ಪ್ರಶ್ನೆಗೆ ಉತ್ತರಿಸುವ ಕನಿಷ್ಠ ಧೈರ್ಯವನ್ನು ಸುನಿಲ್ ಕುಮಾರ್ & @BJP4Karnataka ತೋರುವರೇ? pic.twitter.com/xNh7ocKwbf
— Karnataka Congress (@INCKarnataka) April 6, 2023