ಮೆಕ್ಸಿಕೋ ನಗರದಲ್ಲಿ ನಡೆದ ಆಘಾತಕಾರಿ ಘಟನೆಗೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ರಸ್ತೆಯಲ್ಲಿ ಜನರನ್ನು ಭೇಟಿಯಾಗಿ ಮಾತನಾಡುತ್ತಿದ್ದ ವೇಳೆ, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ಅಚಾನಕ್ ಮುಂದೆ ಬಂದು ಅವರನ್ನು ಮುಟ್ಟಲು ಹಾಗೂ ಮುತ್ತಿಡಲು ಯತ್ನಿಸಿದ್ದಾರೆ.
#México | El supuesto “manoseo” a Sheinbaum no es descuido, es distracción.
Cada vez que estalla un escándalo o un asesinato político, aparece un circo mediático.
AMLO lo hacía con conferencias; Claudia con montajes.
La vieja escuela del poder maquillando la crisis. pic.twitter.com/u1D8EEJQcr— Gildo Garza (@GildoGarzaMx) November 4, 2025
ಅಂತೆಯೇ, ಅಚ್ಚರಿಗೊಳಗಾದ ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಆ ವ್ಯಕ್ತಿಯನ್ನು ದೂರ ಸರಿಸಿದ್ದಾರೆ. ಈ ಘಟನೆ ಉನ್ನತ ನಾಯಕತ್ವದ ಭದ್ರತೆಯ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.
ಆದಾಗ್ಯೂ, ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಘಟನೆಗೆ ವಿಚಲಿತರಾಗದೆ ಶಾಂತವಾಗಿ ಪ್ರತಿಕ್ರಿಯಿಸಿ, ಅಲ್ಲಿದ್ದ ನಾಗರಿಕರೊಂದಿಗೆ ಎಂದಿನಂತೆ ಮಾತುಕತೆ ಮುಂದುವರಿಸಿದ್ದಾರೆ.


















































