ಬೆಂಗಳೂರು: ಉದ್ಯೋಗ ಉತ್ತೇಜನ ಪರಿಕಲ್ಪನೆಯಲ್ಲಿ ಯಶಸ್ವಿಯಾಗಿರುವ Chef Talk ಕಂಪೆನಿಯ ಪ್ರವರ್ತಕರಾದ ಗೋವಿಂದ ಪೂಜಾರಿ ಇದೀಗ ರಾಜ್ಯ ಸರ್ಕಾರದ ಮೀನುಗಾರಿಕಾ ಇಲಾಖೆ ಜೊತೆ ಕೈಜೋಡಿಸಿದ್ದಾರೆ. ಮತ್ಯೋದ್ಯಮಕ್ಕೆ ಸ್ಫೂರ್ತಿಯಾಗಿ ಹಾಗೂ ನಿರುದ್ಯೋಗಿಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ‘ಮತ್ಸ್ಯಬಂಧ’ ಯೋಜನೆಯನ್ನು ಆರಂಭಿಸಿರುವ ಗೋವಿಂದ ಬಾಬು ಪೂಜಾರಿ, ಇದೀಗ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹೊನ್ನಪ್ಪ ರೆಡ್ಡಿ ಬಡಾವಣೆಯಲ್ಲಿ ‘ಮತ್ಸ್ಯದರ್ಶಿನಿ’ ಆರಂಭಿಸಿದ್ದಾರೆ.
ಮತ್ಸ್ಯಪ್ರಿಯರ ಅಭಿರುಚಿಗೆ ತಕ್ಕಂತೆ ಖಾದ್ಯ ಸಿದ್ದಪಡಿಸಿ ಒದಗಿಸುವ ಈ ದರ್ಶಿನಿಗೆ ರಾಜ್ಯ ಸರ್ಕಾರದ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧಿಕಾರಿಗಳು ಬುಧವಾರ ಚಾಲನೆ ನೀಡಿದರು.
ಕಬ್ಬನ್ ಪಾರ್ಕ್ ಬಳಿ ಗ್ರಾಹಕರನ್ನು ಸಂತುಷ್ಟಗೊಳಿಸುವಲ್ಲಿ ಯಶಸ್ವಿಯಾಗಿರುವ ಮತ್ಸ್ಯದರ್ಶಿನಿ ರೀತಿಯಲ್ಲೇ ಹೊನ್ನಪ್ಪ ರೆಡ್ಡಿ ಲೇಔಟ್‌ನ ಟಿ.ರಾಮಣ್ಣ ಗಾರ್ಡನ್‌ನಲ್ಲಿ ಸುಸಜ್ಜಿತ ಮತ್ಸ್ಯದರ್ಶಿನಿ ಆರಂಭಗೊಂಡಿದೆ. ಕಡಲ ತೋರಕ್ಕಷ್ಟೇ ಸೀಮಿತವಾಗಿದ್ದ ವಿವಿಧ ತಳಿಗಳ ಮೀನುಗಳ ಖಾಧ್ಯ ಇಲ್ಲಿ ಲಬ್ಯವಿದೆ. ತಾಜಾ ಮೀನುಗಳ ಪೂರೈಕೆಗೂ ಅವಕಾಶ ನೀಡಲಾಗುತ್ತಿದೆ ಎಂದು ಇದರ ಮಾಲಕರೂ ಆದ ChefTalk ಕಂಪೆನಿಯ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ.
ChefTalk , ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್, ವರಲಕ್ಷ್ಮೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸೇರಿದಂತೆ ವಿವಿಧ ಸಂಸ್ಥೆಗಳ ಮೂಲಕ ಸುಮಾರು ಆರೂವರೆ ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿರುವ ಗೋವಿಂದ ಬಾಬು ಪೂಜಾರಿ, ಇದೀಗ ತಮ್ಮ ಮುಂದಾಳುತ್ವದಲ್ಲಿ ಪ್ರಜ್ಞಾ ಸಾಗರ್ ಹೊಟೇಲ್ಸ್ ಆ್ಯಂಡ್ ರೆಸಾರ್ಟ್ಸ್ ಸಂಸ್ಥೆಯನ್ನು ಕಟ್ಟಿದ್ದಾರೆ. ಅದರ ಅಂಗ ಸಂಸ್ಥೆಯಾಗಿ ಈ ಮತ್ಸ್ಯ ದರ್ಶಿನಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಆಹಾರೋತ್ಪನ್ನ ಹಾಗೂ ಮತ್ಸ್ಯಖಾದ್ಯ ಒದಗಿಸಲಿದೆಯಂತೆ. ರಾಜ್ಯದ ವಿವಿಧೆಡೆ ಈ ರೀತಿಯ ಘಟಕಗಳನ್ನು ಆರಂಭಿಸುವ ಚಿಂತನೆ ಇದೆ ಎಂದು ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ.