ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಕಳ್ಳರ ಹಾವಳಿಗೆ ವೈಟ್’ಫೀಲ್ಡ್ ಉಪವಿಭಾಗ ಪೊಲೀಸರು ಅಂಕುಶ ಹಾಕಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿದ ಎಸಿಪಿ ರೀನಾ ಸುವರ್ಣ ನೇತೃತ್ವದ ಪೊಲೀಸರು ಕಳ್ಳರನ್ನು ಜೈಲಿಗಟ್ಟಿದ್ದಾರೆ. ಸುಮಾರು 20 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹದೇವಪುರ ಸಮೀಪದ ಗೋಪಾಲನ್ ಇಂಟರ್ ನ್ಯಾಷನ್ ಸ್ಕೂಲ್ ಬಳಿ ನಿಲ್ಲಿಸಲಾಗಿದ್ದ ಯಮಹ ಆರ್’ಎಕ್ಸ್ ಬೈಕ್ ಕಳೆದುಹೋಗಿರುವ ಬಗ್ಗೆ ನಾಗರಾಜು ಎಂಬವರು ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ರೀನಾ ಸುವರ್ಣ ಅವರು ಮಹದೇವಪುರ ಠಾಣೆಯ ಇನ್ಸ್‌ಪೆಕ್ಟರ್ ಜಿ.ಪ್ರವೀಣ್ ಬಾಬು, PSIಗಳಾದ ಮಹೇಶ್, ಪರಶುರಾಮ್ ಮತ್ತು ಸುನೀಲ್ ಕಡ್ಡಿ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಮುನ್ನುಡಿ ಬರೆದರು.

ಕಳ್ಳರಿಗಾಗಿ ಖೇಡಾ ತೋಡಿದ ಈ ಪೊಲೀಸರು ರಾಮಮೂರ್ತಿನಗರ ನಿವಾಸಿಗಳಾದ ಮನು ಬಿನ್ ದ್ಯಾವೇಗೌಡ ಮತ್ತು ಸಚ್ಚಿನ್ ಬಿನ್ ಬಾಲರಾಜು ಎಂಬಿಬ್ಬರನ್ನು ಬಂಧಿಸಿ ಬೆಂಗಳೂರಿನ ಹಲವೆಡೆ ನಡೆದಿರುವ ಪ್ರಕರಣಗಳನ್ನು ಬೇಧಿಸಿದ್ದಾರೆ. ಕಳ್ಳರು ಬೆಂಗಳೂರಿನ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳುವು ಮಾಡಿ ರಾಜ್ಯದ ವಿವಿಧೆಡೆ ಮಾರಾಟ ಮಾಡುತ್ತಿದ್ದರು. ಕೆಲವು ವಾಹನಗಳು ತಾಂತ್ರಿಕ ಕಾರಣಗಳಿಂದಾಗಿ ಮಾರಾಟವಾಗದಿದ್ದಾಗ ಬೆಂಗಳೂರಿನ ನಿಗೂಢ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದರು. ಈ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡ ಮಹದೇವಪುರ, ವೈಟ್ ಪೀಲ್ಡ್, ಹೆಚ್.ಎ.ಎಲ್, ರಾಮಮೂರ್ತಿನಗರ ಸೇರಿದಂತೆ ಬೆಂಗಳೂರಿನ ವಿವಿಧ ಕಡೆ ಕಳ್ಳತನವಾಗಿರುವ ಸುಮಾರು 20 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು ಸುಮಾರು 37,50.000 ಮೌಲ್ಯದ ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತೆ ರೀನಾ ಸುವರ್ಣಾ ತಿಳಿಸಿದ್ದಾರೆ. ಎ1 ಮತ್ತು ಎ2 ಆರೋಪಿಗಳು ಕೃತ್ಯಕ್ಕೆ ಬಳಸಿದ ಎಲೆಕ್ನಿಕ್ ದ್ವೀ ಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.

ವೈಟ್ ಫಿಲ್ಡ್ ವಿಭಾಗದ ಡಿಸಿಪಿ ಕೆ.ಪರಶುರಾಮ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಎಸಿಪಿ ರೀನಾ ಸುವರ್ಣ ನೇತೃತ್ವದ ತಂಡದಲ್ಲಿ ಮಹದೇವಪುರ ಠಾಣೆಯ ಇನ್ಸ್‌ಪೆಕ್ಟರ್ ಜಿ.ಪ್ರವೀಣ್ ಬಾಬು, ಪಿಎಸ್‌ಐಗಳಾದ ಮಹೇಶ್, ಪರಶುರಾಮ್, ಸುನೀಲ್ ಕಡ್ಡಿ, ಅಧಿಕಾರಿಗಳಾದ ಈರಪ್ಪ, ಮಂಜುನಾಥ, ಸಿದ್ದಪ್ಪ ಗದ್ಯಾಲ, ಕವಿತಾ, ಮಂಜುನಾಥ ಮಕನಾಪೂರ, ಸಚ್ಚಿನ್, ಕ್ರಾಂತಿ ಮುರನಾಳ್, ಸಂತೋಷ್ ಕರ್ಜಗಿ, ನಿತ್ಯಾನಂದ ಮೊದಲಾದವರು ಸಾಥ್ ನೀಡಿದ್ದರು.























































