ಮಂಗಳೂರು: ಶ್ರೀ ಗೋರಕ್ಷನಾಥ್ ಗದ್ದುಗೆಯ ಪೀಠಾಧೀಶ್ವರ, ನಾಥ ಪಂಥದ ಪರಮೋಚ್ಚ ಧರ್ಮಗುರು, ಹಿಂದೂ ಯುವ ವಾಹಿನಿಯ ಸಂಸ್ಥಾಪಕರು ಮತ್ತು ರಾಷ್ಟ್ರೀಯ ಸಂರಕ್ಷಕರಾಗಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನ್ಮ ದಿನದ ಅಂಗವಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆದವು. ದಕ್ಷಿಣ ಕನ್ನಡ ಜಿಲ್ಲೆಯೂ ವಿವಿಧ ಜನಪರ ಕೈಂಕರ್ಯಗಳಿಗೆ ಸಾಕ್ಷಿಯಾಯಿತು.
ರಾಷ್ಟ್ರವಾದಿ, ಉತ್ತರ ಪ್ರದೇಶದ ಅಭಿವೃದ್ಧಿಯ ಹರಿಕಾರ ಹಾಗೂ ಯಶಸ್ವೀ ಮುಖ್ಯಮಂತ್ರಿ ಎಂದೇ ಗುರುತಾಗಿರುವ ಹಿಂದೂ ಹ್ರದಯ್ ಸಾಮ್ರಾಟ್ ಮಹಾಂತ್ ಯೋಗಿ ಆದಿತ್ಯನಾಥ್ ಜಿ ಮಹಾರಾಜ್ ಅವರ ಅವತರಣ ದಿವಸದ ಅಂಗವಾಗಿ ಹಿಂದೂ ಯುವ ವಾಹಿನಿ ಕೈಗೊಂಡ ಕಾರ್ಯಕ್ರಮ ಗಮನಸೆಳೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಪೂಜೆ ಹಾಗೂ ವನಮಹೋತ್ಸವ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಜಿ ಮಹಾರಾಜ್ ಅವರ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಇದೇ ವೇಳೆ, ಪೊಳಲಿಯ ಶ್ರೀ ರಾಮಕೃಷ್ಣ ತಪೋವನದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾದರು.
ಈ ಸಂದರ್ಭದಲ್ಲಿ ಪೊಳಲಿ ಶ್ರೀ ರಾಮಕ್ರಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಹಿಂದೂ ಯುವ ವಾಹಿನಿಯ ಸಮಾಜಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದೂ ಯುವ ವಾಹಿನಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕರ್ತರು ಹಾಗೂ ಹಿಂದೂ ಜಾಗರಣ ವೇದಿಕೆಯ ಗಣೇಶ್ ಕೆದಿಲ, ಶಿವಪ್ರಸಾದ್ ಬಂಟ್ವಾಳ, ಹಿಂದೂ ಯುವ ವಾಹಿನಿ ಕರ್ನಾಟಕದ ರಾಜ್ಯ ಉಪಾಧ್ಯಕ್ಷ ಪದ್ಮನಾಭ ಪೂಜಾರಿಯವರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾದರು.





















































