ಮಂಗಳೂರು: ಬಂದರು ನಗರಿ ಮಂಗಳೂರು ಬಳಿ ಇಂದು ಬೆಳ್ಳಂಬೆಳಿಗ್ಗೆಯೇ ಬೆಚ್ಚಿ ಬೀಳಿಸುವ ಘಟನೆ ವರದಿಯಾಗಿದೆ. ಕೊರೋನಾದಿಂದ ಬೇಸತ್ತ ದಂಪತಿ ಸಾವಿಗೆ ಶರಣಾಗಿದ್ದಾರೆ.
ಸುರತ್ಕಲ್ ಸಮೀಪ ರಮೇಶ್ ಕುಮಾರ್ ಹಾಗೂ ಗುಣ ಸುವರ್ಣ ಎಂಬ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾವಿಗೂ ಮುನ್ನ ಬೆಳಿಗ್ಗೆ, ರಮೇಶ್ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ತಾವು ಆತ್ಮಹತ್ಯೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸ್ ಆಯುಕ್ತರಿಂದ ಮನವೊಲಿಸಲು ಸಾಧ್ಯವಾಗಿಲ್ಲ. ಅವರು ರಮೇಶ್‌ಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ. ಹಾಗಾಗಿ ಕಮೀಷನರ್ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಲೊಕೇಷನ್ ಟ್ರೇಸ್ ಮಾಡಿದ ಸ್ಥಳೀಯ ಪೊಲೀಸರು ಫ್ಲಾಟ್‌ಗೆ ತೆರಳಿ ನೋಡಿದಾಗ ದಂಪತಿ ಸಾವಿಗೆ ಶರಣಾಗಿದ್ದರು.
ಹಿಂದೂ ಸಂಘಟನೆಗಳ ಮುಖಂಡರಿಗೂ ಸಂದೇಶ ನೀಡಿ ತಾವು ಸಾವಿಗೆ ಶರಣಾಗುವುದಾಗಿ ತಿಳಿಸಿದ್ದಾರೆನ್ನಲಾಗಿದೆ. ತಾಮ್ಮ ಅಂತ್ಯ ಸಂಸ್ಕಾರಕ್ಕಾಗಿ 1 ಲಕ್ಷ ರೂಪಾಯಿ ಇಟ್ಟಿರುವುದಾಗಿ ತಿಳಿಸಿರುವ ಈ ದಂಪತಿ, ತಮ್ಮ ಮನೆಯಲ್ಲಿನ ವಸ್ತುಗಳನ್ನು ಮಾರಿ ಬಡವರಿಗೆ ನೀಡುವಂತೆಯೂ ಸೂಚಿಸಿದ್ದಾರೆ ಎನ್ನಲಾಗಿದೆ.