ಉದ್ಯೋಗಾನುಭವದಿಂದ ಅರ್ಹತೆಯನ್ನು ಬೆಳೆಸಿ: ಗಿರೀಶ್.. ಕೆನರಾ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ..
ಮಂಗಳೂರು: ಅರ್ಹ ಉದ್ಯೋಗಕ್ಕಾಗಿ ಹಾತೊರೆಯುವ ಬದಲು ದೊರೆತ ಉದ್ಯೋಗ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅರ್ಹತೆಯನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಅನುಭವವನ್ನು ವೃದ್ಧಿಸಿಕೊಳ್ಳಬೇಕು. ಆ ಮೂಲಕ
ವೃತ್ತಿಯಲ್ಲಿ ಅರ್ಹತೆ ಜೊತೆಗೆ ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಕ್ಯೂಸ್ಪೈಡರ್ಸ್ ಜೆ ಸ್ಪೈಡರ್ಸ್ ಆ್ಯಂಡ್ ಟೆಸ್ಟ್ ಯಂತ್ರ ಸಾಫ್ಟ್ವೇರ್ ಸೊಲ್ಯೂಶನ್ಸ್ನ ಕೋ ಫೌಂಡರ್, ಸಿಇಓ ಗಿರೀಶ್ ಹೇಳಿದ್ದಾರೆ.
ಕೆನರಾ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶನಿವಾರ ಸಂಜೆ ನಡೆದ 2021ನೇ ಸಾಲಿನ 421 ವಿದ್ಯಾರ್ಥಿಗಳ 17ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗಿಯಾದರು.ಶಿಕ್ಷಣ ಸಂಸ್ಥೆಗಳನ್ನು ಕಟ್ಟುವಲ್ಲಿ
ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಅವರು
ವಿದ್ಯಾರ್ಥಿಗಳು ಸವಾಲನ್ನು ಎದುರಿಸುವ ಮೂಲಕ ಬೆಳೆಯಬೇಕು ಎಂದು ಹಾರೈಸಿದರು.