(ರಾಘವೇಂದ್ರ ಗಂಜಾಮ್)
ಮಂಡ್ಯ: ಮೇಲುಕೋಟೆಯಲ್ಲಿ ಮದುವೆಗಳು ನಡೆಯುವುದು ಸಾಮಾನ್ಯ. ಆದ್ರೆ ಇಂದು ಮೇ ಲುಕೋಟೆಯಲ್ಲಿ ನಡೆದ ವಿವಾಹವೊಂದು ಅಪ ಅಪರೂಪದ ಮದುವೆಗೆ ಸಾಕ್ಷಿ ಎನಿಸಿತು. ವ್ಯಕ್ತಿಯೊಬ್ಬರು ತಾನು 30 ವರ್ಷದ ಹಿಂದೆ ಪ್ರೀತಿಸಿದ ಯುವತಿಯನ್ನು ತನ್ನ 65 ನೇ ವರ್ಷದ ಇಳಿವಯಸ್ಸಿನಲ್ಲಿ ಮೇಲುಕೋಟೆ ಯಲ್ಲಿ ಸರಳ ವಾಗಿಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೌದು! ಇಂದು ಮಂಡ್ಯ ಜಿಲ್ಲೆಯ ಮೇಲುಕೋ ಟೆಯಲ್ಲಿ ಇಂದು ಅಪರೂಪದ ವಿವಾಹವೊಂ ದು ನಡೆಯಿತು.ಈ ಮೂಲಕ 30ವರ್ಷದ ಪ್ರೀತಿ ಗೆ ಈ ಸಾಕ್ಷಿ ಆಯಿತು. ಮೈಸೂರಿನ ಹೆಬ್ಬಾಳ ನಿವಾಸಿಯಾದ ಚಿಕ್ಕಣ್ಣ ಮೂವತ್ತು ವರ್ಷದ
ಹಿಂದೆ ಹೊಳೆ ನರಸೀಪುರದಲ್ಲಿದ್ದಾಗ ಜಯಣ್ಣ ಎಂಬ ತನ್ನ ಅತ್ತೆ ಮಗಳನ್ನು ಪ್ರೀತಿಸಿದ್ರು.ಆ ವೇ
ಳೆ ಚಿಕ್ಕಣ್ಣ ಬಡವರಾಗಿದ್ದ ಕಾರಣ ಜಯಮ್ಮ ಮನೆಯವರು ಇವರ ಪ್ರೀತಿಗೆ ಒಪ್ಪಿಗೆ ನೀಡದೆ
ತಿರಸ್ಕಾರ ಮಾಡಿ ಜಯಮ್ಮನನ್ನು ಬೇರೆಡೆ ಮದುವೆ ಮಾಡಿದ್ರು.
ಬಳಿಕ ಮದುವೆಯಾಗಲು ನಿರ್ಧರಿಸಿದ ಈ ಜೋಡಿ ಗುರುವಾರ ಮೇಲುಕೋಟೆ ಚಲುವರಾಯ ಸ್ವಾಮಿ ದೇವಾಲಯದ ಮುಂಭಾಗ ಶ್ರೀನಿವಾಸ್ ಗುರೂಜೀ ಅವರ ಆಶ್ರಮದಲ್ಲಿ ಈ ಇಬ್ಬರುಯಾಗಲು ನಿರ್ಧರಿಸಿದ್ರು. 30 ವರ್ಷದ ಪ್ರೀತಿ ಕೇಳಿ ಗುರುಗಳು ಕೂಡ ಇವರ ಸರಳ ಮದುವೆಗೆ ಪೌರೋಹಿತ್ಯ ವಹಿಸಿ ಮದುವೆ ನೆರವೇರಿಸಿದ್ರು.
ಒಟ್ಟಾರೆ ಮೇಲುಕೋಟೆಯಲ್ಲಿ ಇಂದು ನಡೆದ ಇವರಿಬ್ಬರ ಈ ವಿವಾಹ ದೀರ್ಘಕಾಲದ ಪ್ರೀತಿಗೆ ಸಾಕ್ಷಿ ಎನಿಸಿತು. ಕಡೆಗೂ ಕೂಡ ತನ್ನ ಪ್ರೀತಿಯ ಪ್ರೇಯಸಿ ತನ್ನ ಮಡದಿಯಾಗಿದ್ದು ಚಿಕ್ಕಣ್ಣನಿಗೆ ಸಂತಸಕ್ಕೆ ಕಾರಣವಾಗಿತ್ತು.