ಬೆಂಗಳೂರು: 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಎಲ್ಲ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಂದು ಸರ್ಕಾರಿ ಕಚೇರಿಗಳಿಗೆ ರಜೆ ಇರುತ್ತದೆ. ಅದನ್ನು ಹೊರತುಪಡಿಸಿದಂತೆ ರಾಜ್ಯ ಸರ್ಕಾರಿ ಕಚೇರಿ ಸಿಬ್ಬಂದಿಗೆ ರಜಾ ದಿನಗಳು ಈ ರೀತಿ ಇವೆ
- 15-1-2022: ಶನಿವಾರ :ಮಕರ ಸಂಕ್ರಾಂತಿ ಹಬ್ಬ
- 26-1-2022: ಬುಧವಾರ: ಗಣರಾಜ್ಯೋತ್ಸವ
- 1-3-202022: ಮಂಗಳವಾರ:ಮಹಾ ಶಿವರಾತ್ರಿ
- 2-4-2022: ಶನಿವಾರ: ಯುಗಾದಿ ಹಬ್ಬ
- 14-4-20222: ಗುರುವಾರ: ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ
- 15-4-2022: ಶುಕ್ರವಾರ: ಗುಡ್ಫ್ರೈಡೇ
- 3-5-2022: ಮಂಗಳವಾರ:ಬಸವೇಶ್ವರ ಜಯಂತಿ, ಅಕ್ಷಯ ತೃತೀಯ, ಖುತುಬ್-ಎ-ರಂಜಾನ್
- 9-8-2022: ಬುಧವಾರ:ಮೊಹರಂ ಕಡೇ ದಿನ
- 15-8-2022: ಸೋಮವಾರ: ಸ್ವಾತಂತ್ರ್ಯ ದಿನಾಚರಣೆ
- 31-8-2022: ಬುಧವಾರ: ವರಸಿದ್ಧಿ ವಿನಾಯಕ ವ್ರತ
- 4-10-2022: ಮಂಗಳವಾರ: ಮಹಾನವಮಿ, ಆಯುಧಪೂಜೆ
- 5-10-2022: ಬುಧವಾರ: ವಿಜಯದಶಮಿ
- 24-10-2022: ಸೋಮವಾರ: ನರಕ ಚತುರ್ದಶಿ
- 26-10-2022: ಬುಧವಾರ- ಬಲಿಪಾಡ್ಯಮಿ, ದೀಪಾವಳಿ
- 1-11-2022: ಮಂಗಳವಾರ: ಕನ್ನಡ ರಾಜ್ಯೋತ್ಸವ
- 11-11-2022: ಶುಕ್ರವಾರ: ಕನಕದಾಸ ಜಯಂತಿ
ಈ ನಡುವೆ, ಮೇ 1-ಕಾರ್ಮಿಕ ದಿನಾಚರಣೆ, ಜುಲೈ 10- ಬಕ್ರೀದ್, ಸೆಪ್ಟೆಂಬರ್ 25, ಮಹಾಲಯ ಅಮಾವಾಸ್ಯೆ, ಅಕ್ಟೋಬರ್ 2- ಗಾಂಧೀ ಜಯಂತಿಿ, ಅಕ್ಟೋಬರ್ 9- ಮಹರ್ಷಿ ವಾಲ್ಮೀಕಿ ಜಯಂತಿ/ ಈದ್ ಮಿಲಾದ್, ಡಿಸೆಂಬರ್ 25- ಕ್ರಿಸ್ಮಸ್ ಹಬ್ಬ, ವಿಶೇಷ ದಿನಗಳು ಭಾನುವಾರ ಬಂದಿವೆ.