ರೀಲ್ಸ್ ರಾದ್ದಾಂತ, ಸೆಲ್ಫೀ ಗೀಲು ಅವೆಷ್ಟೋ ಮಂದಿಯನ್ನು ಬಲಿ ತೆಗೆದುಕೊಂಡಿವೆ. ಇದೀಗ ಮಳೆಗಾಲವು ಮತ್ತಷ್ಟು ಘಟನೆಗಳಿಗೆ, ಭಯಾನಕ ದುರಂತಗಳಿಗೆ ಸಾಕ್ಷಿಯಾಗುತ್ತಿವೆ.
ಕೆಲ ದಿನಗಳ ಹಿಂದಷ್ಟೇ ಉಡುಪಿ ಸಮೀಪದ ಜಲಪಾತದಲ್ಲಿ ರೀಲ್ಸ್ ಮಾಡಲು ಹೋದ ವ್ಯಕ್ತಿ ಪ್ರವಾಹದಲ್ಲಿ ಕೊಚ್ಚಿಹೋದ ಘಟನೆ ಬೆನ್ನಲ್ಲೇ ಸಾಗರ ತಡಿಯಲ್ಲಿ ಮತ್ತೊಂದು ಭಯಾನಕ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಡಲ ತೀರದಲ್ಲಿ ತರೆಗಳ ಅಬ್ಬರದ ನಡುವೆ ಸೆಲ್ಫೀ ತೆಗೆಯುವ ಆತುರದಲ್ಲಿದ್ದ ಮಂದಿ ಅಲೆಗಳಲ್ಲಿ ಕೊಚ್ಚಿಹೋದ ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಮನ್ ಬೀಚ್‌ನಲ್ಲಿ ಘಟಿಸಿದ ದುರಂತದ ಹಳೇಯ ಘಟನೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶವಾಗಿದೆ.
ಕೇವಲ ಒಂದು ಪೋಟೋ ಅಥವಾ ಒಂದು ರೀಲ್ಸ್ ಗಾಗಿ ತಮ್ಮ ಅಮೂಲ್ಯ ಪ್ರಾಣವನ್ನೆ ಕಳೆದುಕೊಳ್ಳುವ ಹಂತಕ್ಕೆ ಹೋಗುವ ನಮ್ಮ ಇಂದಿನ ಜನಾಂಗಕ್ಕೆ ಮೊಬೈಲ್ ನಲ್ಲಿನ ಮನ್ನಣೆಯ ದಾಹ ಎಷ್ಟಿರಬೇಕು!?
ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಕಾರಣ ನದಿ, ಜಲಪಾತಗಳಲ್ಲಿ ನೀರಿನ ಮಟ್ಟ ಸಹಜವಾಗಿಯೇ ಹೆಚ್ಚಿರುತ್ತದೆ. 1/3 pic.twitter.com/R5uI2rjkPS
— ಪರಿಸರ ಪರಿವಾರ (@Parisara360) July 24, 2023
ಕೇವಲ ಒಂದು ಪೋಟೋ ಅಥವಾ ಒಂದು ರೀಲ್ಸ್ ಗಾಗಿ ತಮ್ಮ ಅಮೂಲ್ಯ ಪ್ರಾಣವನ್ನೆ ಕಳೆದುಕೊಳ್ಳುವ ಹಂತಕ್ಕೆ ಹೋಗುವ ನಮ್ಮ ಇಂದಿನ ಜನಾಂಗಕ್ಕೆ ಮೊಬೈಲ್ ನಲ್ಲಿನ ಮನ್ನಣೆಯ ದಾಹ ಎಷ್ಟಿರಬೇಕು!? ಎಂಬ ಪ್ರಶ್ನೆಯನ್ನು ಈ ದೃಶ್ಯ ಹುಟ್ಟುಹಾಕಿದೆ.






















































