ಕೆಲ ಸಮಯದ ಹಿಂದೆ ಕಲ್ಪತರು ನಾಡಿನ ಸಮೀಪ ಕೆರೆಯಲ್ಲಿ ಮುಳುಗುತ್ತಿದ್ದವರನ್ನು ಕೆಎಸ್ಸಾರ್ಟಿಸಿ ಚಾಲಕ ಪ್ರಾಣದ ಹಂಗು ತೊತರೆದು ರಕ್ಷಿಸಿದ್ದ ಸನ್ನಿವೇಶ ಇಡೀ ದೇಶದ ಗಮನಸೆಳೆದಿತ್ತು. ಚಿಕ್ಕಮಗಳೂರು ವಿಭಾಗದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ನೋವು ಕಾಣಿಸಕೊಂಡಾಗ ಕೆಎಸ್ಸಾರ್ಟಿಸಿ ನಿರ್ವಾಹಕಿ ತಾನೇ ವೈದ್ಯೆಯ ಸ್ಥಾನದಲ್ಲಿ ನಿಂತು ಹೆರಿಗೆ ಮಾಡಿಸಿ ತಾಯಿ-ಮಗುವಿನ ಪ್ರಾಣ ಉಳಿಸಿ ಮಹಾಮಾತೆ ಎನಿಸಿದ ಪ್ರಸಂಗವೂ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಆಂಕೋಲಾ ಘಟನೆಯ ಸರದಿ..
ಕೆಎಸ್ಸಾರ್ಟಿಸಿ ಬಸ್ ನೌಕರರು ಒಂದಿಲ್ಲೊಂದು ಮಾನವೀಯ ನಡೆಯಿಂದಾಗಿ ಗಮನಕೇಂದ್ರೀಕರಿಸುತ್ತಲೇ ಇರುತ್ತಾರೆ. ಇದೀಗ ಆಂಕೋಲಾದಲ್ಲೂ ಅಚ್ಚರಿ ಹಾಗೂ ಕುತೂಹಲದ ಘಟನೆ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿದೆ.
ಅಂಕೋಲಾದ ಬೆಳಬಾರ ಗ್ರಾಮದ ರಸ್ತೆಯಲ್ಲಿ ನಾಯಿಯೊಂದು ಮುಖಕ್ಕೆ ಡಬ್ಬವನ್ನು ಸಿಕ್ಕಿಸಿಕೊಂಡು ಅಸಹಾಯಕ ರೀತಿಯಲ್ಲಿ ಇರುವುದನ್ನು ಕಂಡು ಬಸ್ಸನ್ನು ದಾರಿಯಲ್ಲಿ ನಿಲ್ಲಿಸಿ, ನಾಯಿಗೆ ಜೀವದಾನವನ್ನು ನೀಡಿದ ಚಾಲಕ "ಅನಂದು ಹುಲಶ್ವರ್ ಮತ್ತು ನಿರ್ವಾಹಕಿ ರಾಜಮ್ಮ ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.@KSRTC_Journeys pic.twitter.com/jcZrSZQLMA
— Ramadas Kumta 🇮🇳 (@ramadaskumta) July 25, 2023
ಅಂಕೋಲಾದ ಬೆಳಬಾರ ಗ್ರಾಮದ ರಸ್ತೆಯಲ್ಲಿ ನಾಯಿಯೊಂದು ಮುಖಕ್ಕೆ ಡಬ್ಬವನ್ನು ಸಿಕ್ಕಿಸಿಕೊಂಡು ಅಸಹಾಯಕ ರೀತಿಯಲ್ಲಿ ಒದ್ದಾಡುತ್ತಿತ್ತು. ಅದೇ ದಾರಿಯಲ್ಲಿ ಸಾಗುತ್ತಿದ್ದ ಬಸ್ ಚಾಲಕನಿಗೆ ನಾಯಿಯ ಅಸಹಾಯಕತೆ ಗೊತ್ತಾಯಿತು. ಕೂಡಲೇ ಬಸ್‌ನಿಂದ ಇಳಿದ ಚಾಲಕ ನಾಯಿಯತ್ತ ಧಾವಿಸಿ, ಮುಖದಲ್ಲಿ ಸಿಕ್ಕಿಕೊಂಡಿದ್ದ ಡಬ್ಬವನ್ನು ತೆಗೆಯುವ ಪ್ರಯತ್ನಿಸಿದ್ದಾರೆ. ಒಬ್ಬನಿಂದ ಇದು ಸಾಧ್ಯವಾಗದಿದ್ದಾಗ ನಿರ್ವಾಹಕಿಯನ್ನು ಕರೆದಿದ್ದಾರೆ. ಮಹಿಳಾ ಕಂಡೆಕ್ಟರ್ ಕೂಡಾ ಚಾಲಕನ ಜೊತೆ ಕೈ ಜೋಡಿಸಿ ಶ್ವಾನವನ್ನು ರಕ್ಷಿಸಿದ್ದಾರೆ. ನಾಯಿಗೆ ಜೀವದಾನವನ್ನು ನೀಡಿದ ಚಾಲಕ “ಅನಂದು ಹುಲಶ್ವರ್ ಮತ್ತು ನಿರ್ವಾಹಕಿ ರಾಜಮ್ಮ ಅವರ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನೆಟ್ಟಿಗರಿಂದಲೂ ಸಕತ್ ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದೆ.