‘ಮದಗಜ’ ಮೇನಿಯಾ.. ಯುಗಾದಿ ವೇಳೆ ಟೀಸರ್; ವರಮಹಾಲಕ್ಷ್ಮೀ ಹಬ್ಬ ಸಂದರ್ಭ ಸಿನಿಮಾ ತೆರೆಗೆ
‘ಮದಗಜ” ಚಿತ್ರತಂಡದ ಹೊಸ ಚಿತ್ರದ ‘ಲವ್‌ಸಮ್’ ಟೀಸರ್ ಬಿಡುಗಡೆಯಾಗಿದೆ. ಯುಗಾದಿ ಸಂದರ್ಭದಲ್ಲಿ ಈ ಟೀಸರ್ ಬಿಡುಗಡೆಯಾಗಿದ್ದು ಸಿನಿರಸಿಕರ ಚಿತ್ತ ಸೆಳೆದಿದೆ.
ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಕಾಣಲಿದೆ. ಆಗಸ್ಟ್ ತಿಂಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ “ಮದಗಜ” ತೆರೆಕಾಣುವ ಸಾಧ್ಯತೆಗಳಿವೆ. ಅದಕ್ಕಾಗಿ ಸಿದ್ದತೆಗಳು ಸಾಗಿವೆ.