ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ಕುಟುಂಬಗಳಿಗೆ ವರದಾನವಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು ದೇಶದ ಜನರ ಹಿತವನ್ನು ಬಯಸಿ ಗ್ಯಾರೆಂಟಿ ಭರವಸೆಗಳನ್ನು ನೀಡಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್‌ನ 5 ಯೋಜನೆಗಳು: ಇವು ‘ನಾರಿ ನ್ಯಾಯ’ ಯೋಜನೆಗಳು..
ಮಹಾಲಕ್ಷ್ಮಿ ಗ್ಯಾರಂಟಿ: ಬಡ ಕುಟುಂಬದ ಪ್ರತಿಯೊಬ್ಬ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ನೀಡಲಾಗುತ್ತದೆ.
ಆದಿ ಆಬಾಧಿ ಪೂರಾ ಹಕ್: ಕೇಂದ್ರ ಸರ್ಕಾರದ ಹೊಸ ನೇಮಕಾತಿಗಳಲ್ಲಿ ಮಹಿಳೆಯರಿಗೆ ಅರ್ಧದಷ್ಟು ಹಕ್ಕುಗಳನ್ನು ನೀಡಲಾಗುತ್ತದೆ.
ಶಕ್ತಿ ಕಾ ಸಮ್ಮಾನ್: ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಕೇಂದ್ರ ಸರ್ಕಾರದಿಂದ ಮಾಸಿಕ ವೇತನ ಕೊಡುಗೆ ದುಪ್ಪಟ್ಟು.
ಅಧಿಕಾರ ಮೈತ್ರಿ: ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಪಂಚಾಯತ್‌ನಲ್ಲಿ ಪ್ಯಾರಾ-ಲೀಗಲ್ ಸಹಾಯಕರನ್ನು ಅಧಿಕಾರ ಮೈತ್ರಿಯಾಗಿ ನೇಮಿಸಲಾಗುತ್ತದೆ.
ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್: ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗಿ ಮಹಿಳೆಯರಿಗಾಗಿ ಹಾಸ್ಟೆಲ್ ನಿರ್ಮಾಣ




























































