ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿರುವುದರಿಂದ ಬೇಸರದಲ್ಲಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ.
ಕೇರಳ ರಾಜ್ಯದ ಚುನಾವಣಾ ಸಹ ಉಸ್ತುವಾರಿಯನ್ನಾಗಿ ಬಿಜೆಪಿ ಹೈಕಮಾಂಡ್ ನಳಿನ್ ಕುಮಾರ್ ಕಟೀಲ್ ಅವರನ್ನು ನೇಮಕ ಮಾಡಿದೆ.
ಇದೇ ವೇಳೆ, ತೆಲಂಗಾಣ ರಾಜ್ಯದ ಚುನಾವಣೆ ಉಸ್ತುವಾರಿಯಾಗಿ ಶಾಸಕ ಅಭಯ್ ಪಾಟೀಲ್ ಅವರನ್ನು ಹಾಗೂ ಮಹಾರಾಷ್ಟ್ರದ ಸಹ ಉಸ್ತುವಾರಿಯನ್ನಾಗಿ ನಿರ್ಮಲ್ ಕುಮಾರ್ ಸುರಾನಾ ಅವರನ್ನು ಬಿಜೆಪಿ ವರಿಷ್ಟರು ನೇಮಕ ಮಾಡಿದ್ದಾರೆ.

































































