ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಜೂನ್ 7ರ ವರೆಗೆ ಲಾಕ್‌ಡೌನ್ ವಿಸ್ತರಣೆಯಾಗಿದೆ. ಈ ಅವಧಿಯಲ್ಲಿ ನಿಯಮಗಳು ಮತ್ತಷ್ಟು ಕಠಿಣವಾಗಿರಲಿದೆ. ಈ ವರೆಗೂ ಅಗತ್ಯ ವವಸ್ತುಗಳ ಖರೀದಿ ನೆಪದಲ್ಲಿ ಊರು ಸುತ್ತುತ್ತಿದ್ದವರಿಗೆ ಇನ್ನು ಮುಂದೆ ಅದು ಅಸಾಧ್ಯ. ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಕಣ್ಗಾವಲು ಹಾಕಿದ್ದು ನಿಯಮ ಮೀರಿದವರ ವಾಹನ ಜಪ್ತಿಯಾಗಲಿದೆ. ಅಷ್ಟೇ ಅಲ್ಲ ಕೇಸ್ ಕೂಡಾ ದಾಖಲಾಗಲಿದೆ.
ಕೆಲವು ದಿನಗಳಿಂದೀಚೆಗೆ ಆಯ್ದ ಸ್ಥಳಗಳಲ್ಲಿ ಪೊಲೀಸರು ವಾಹನಗಳನ್ನು ತಡೆಯುತ್ತಿದ್ದರು. ಇಂದಿನಿಂದ ಈ ತಪಾಸಣಾ ಕಾರ್ಯ ಬಿಗಿಗೊಂಡಿದೆ. ಬೆಳ್ಳಂಬೆಳಿಗ್ಗೆಯೇ ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿರುವ ಪೊಲೀಸರು ಹಲವು ವಾಹನಗಳನ್ನ ಜಪ್ತಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಜಟಾಪಟಿಗಿಳಿದ ಸನ್ನಿವೇಶಗಳು ಹಲವೆಡೆ ಕಂಡುಬಂತು. ಆದರೂ ಕಠಿಣ ನಿಯಮದ ಪರಿಪಾಲನೆಯಲ್ಲಿ ತೊಡಗಿದ್ದ ಪೊಲೀಸರು ಜಪ್ಪೆನ್ನಲಿಲ್ಲ.
ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ನಗರಗಳಲ್ಲೂ ಪೊಲೀಸ್ ಕಾರ್ಯಾಚರಣೆ ಗಮನಸೆಳೆಯಿತು. ಅಗತ್ಯ ಕೆಲಸಕ್ಕೆ ತೆರಳುವವರಿಗೆ ಮಾತ್ರ ಪೊಲೀಸರು ಅನುಮತಿ ನೀಡುತ್ತಿದ್ದರು.
ಯಡಿಯೂರಪ್ಪ ಅವರಿಂದಲೇ ಸೂಚನೆ..
ಲಾಕ್‌ಡೌನ್ ನಿಯಮ ವಿಸ್ತರಣೆ ಸಂದರ್ಭದಲ್ಲೇ ಮಾಹಿತಿ ಹಂಚಿಕೊಂಡಿದ್ದ ಸಿಎಂ ಯಡಿಯೂರಪ್ಪ, ಈ ಕಠಿಣ ನಿಯಮ ಜೂನ್ 7ರವರೆಗೂ ಜಾರಿಯಲ್ಲಿರುತ್ತದೆ ಎಂದು ಘೋಷಿಸಿದ್ದರು. ಯಾವುದೇ ಕಾರಣಕ್ಕೂ ಬೆಳಿಗ್ಗೆ 10 ಗಂಟೆ ನಂತರ ಬೇಕಾಬಿಟ್ಟಿ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದರು.
- ಜೂನ್ 7ರ ವರೆಗೂ ಬೆಳಿಗ್ಗೆ 6ರಿಂದ 10 ಗಂಟೆವರೆಗಷ್ಟೇ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ.
- ಅನಂತರವೂ ರಸ್ತೆಯಲ್ಲಿದ್ದರೆ ಕಠಿಣ ಕ್ರಮ.
ಕಠಿಣ ಕ್ರಮ ಅನುಸರಿಸಲು ಸಿಎಂ ಯಡಿಯೂರಪ್ಪ ಆದೇಶ. - ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆದೇಶ ನೀಡಿರುವ ಯಡಿಯೂರಪ್ಪ.