ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಪದಾಧಿಕಾರಿಗಳನ್ನೂ ನೇಮಕ ಮಾಡಲಾಗಿದೆ. ಈ ಬಾರಿ ರಾಜ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ 7 ಶಾಸಕರಿಗೆ ಜವಾಬ್ಧಾರಿ ಸಿಕ್ಕಿದೆ. ಕಳೆದ ಅವಧಿಯಲ್ಲಿ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿದ್ದಾಗ ಪದಾಧಿಕಾರಿಗಳ ಪೈಕಿ ಬಹುತೇಕ ಮಂದಿಗೆ ಈ ಬಾರಿ ಕೊಕ್ ನೀಡಲಾಗಿದೆ. ಬಹುತೇಕ ಮಂದಿ ಬಿಎಸ್‌ವೈ ಕುಟುಬಕ್ಕೆ ಆಪ್ತರಾಗಿದ್ದಾರೆ.
ಪದಾಧಿಕಾರಿಗಳ ಪಟ್ಟಿ ಹೀಗಿದೆ:
-
ರಾಜ್ಯ ಉಪಾಧ್ಯಕ್ಷರು: ಮುರುಗೇಶ್ ನಿರಾಣಿ,ಬೈರತಿ ಬಸವರಾಜ,ರಾಜೂ ಗೌಡ ನಾಯಕ್,ಎನ್.ಮಹೇಶ್,ಅನಿಲ್ ಬೆನಕೆ,ಹರತಾಳು ಹಾಲಪ್ಪ,ರೂಪಾಲಿ ನಾಯಕ್,ಡಾ. ಬಸವರಾಜ ಕೇಲಗಾರ,ಮಾಳವಿಕಾ ಅವಿನಾಶ್,ಎಂ. ರಾಜೇಂದ್ರ ನೇಮಕ.
-
ರಾಜ್ಯ ಪ್ರಧಾನ ಕಾರ್ಯದರ್ಶಿಗಳು: ವಿ. ಸುನೀಲ್ ಕುಮಾರ್, ಪಿ. ರಾಜೀವ್, ಎನ್.ಎಸ್. ನಂದೀಶ್ ರೆಡ್ಡಿ ಜೆ. ಪ್ರೀತಮ್ ಗೌಡ.
-
ರಾಜ್ಯ ಕಾರ್ಯದರ್ಶಿಗಳು: ಶೈಲೇಂದ್ರ ಬೆಲ್ದಾಳೆ, ಡಿ.ಎಸ್. ಅರುಣ್, ಬಸವರಾಜ ಮತ್ತಿಮೂಡ, ಸಿ. ಮುನಿರಾಜು, ವಿನಯ್ ಬಿದರೆ, ಕ್ಯಾ. ಬ್ರಿಜೇಶ್ ಚೌಟ, ಶರಣು ತಳ್ಳಿಕೇರಿ, ಲಲಿತಾ ಅನಾಪುರ, ಡಾ. ಲಕ್ಷ್ಮೀ ಅಶ್ವಿನ್ ಗೌಡ, ಅಂಬಿಕಾ ಹುಲಿನಾಯ್ಕರ್.
-
ರಾಜ್ಯ ಖಜಾಂಚಿ: ಸುಬ್ಬನರಸಿಂಹ ನೇಮಕ.
-
ವಿವಿಧ ಮೋರ್ಚಾಗಳ ಅಧ್ಯಕ್ಷರು: ಮಹಿಳಾ ಮೋರ್ಛಾ: ಸಿ. ಮಂಜುಳಾ.ಯುವ ಮೋರ್ಛಾ: ಧೀರಜ್ ಮುನಿರಾಜು.ಎಸ್ಟಿ ಮೋರ್ಛಾ: ಬಂಗಾರು ಹನುಮಂತು.ಎಸ್ಸಿ ಮೋರ್ಛಾ: ಎಸ್. ಮಂಜುನಾಥ್ಒಬಿಸಿ ಮೋರ್ಛಾ: ರಘು ಕೌಟಿಲ್ಯರೈತ ಮೋರ್ಛಾ: ಎ.ಎಸ್. ಪಾಟೀಲ್ ನಡಹಳ್ಳಿ.ಅಲ್ಪಸಂಖ್ಯಾತ ಮೋರ್ಛಾ: ಅನಿಲ್ ಥಾಮಸ್.
ಈ ಬಾರಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಆಯ್ಕೆ ಬಗ್ಗೆ ಬಗೆ ಬಗೆಯ ವಿಶ್ಲೇಷಣೆಗಳು ಪ್ರತಿಧ್ವನಿಸಿವೆ. ಒದಾಧಿಕಾರಿಗಳ ಪೈಕಿ ಹಲವರು ಶಾಸಕರಾಗಿದ್ದರೆ, ಇನ್ನೂ ಅನೇಕರು ಬಿಎಸ್‌ವೈ ಕುಟುಂಬದ ಆಪ್ತರು ಎನ್ನಲಾಗಿದೆ. ನಳಿನ್ ಕುಮಾರ್ ಅವಧಿಯಲ್ಲಿದ್ದ ಸಂತೊಷ್ ಆಪ್ತ ಬಳಗದ ಅನೇಕರಿಗೆ ಈ ಬಾರಿ ಕೊಕ್ ನೀಡಿರುವುದು ಅಚ್ಚರಿಯ ಬೆಳವಣಿಗೆ.
ಪದಾಧಿಕಾರಿಗಳ ನೇಮಕದ ಹೈಲೈಟ್ಸ್:
ಪದಾಧಿಕಾರಿಗಳ ಪಟ್ಟಿಯಲ್ಲಿ 6 ಶಾಸಕರು, ವಿಧಾನಪರಿಷತ್ನ ಓರ್ವ ಸದಸ್ಯ ಹಾಗೂ10 ಮಂದಿ ಮಾಜಿ ಶಾಸಕರು ಸ್ಥಾನ ಪಡೆದಿದ್ದಾರೆ.
ಪದಾಧಿಕಾರಿಗಳ ಪೈಕಿ 6 ಮಂದಿ ಬಿಎಸ್‌ವೈ ಆಪ್ತರು, ಇಬ್ಬರು ಬಿ.ವೈ.ವಿಜಯೇಂದ್ರ ಆಪ್ತರು.
ಆರು ಮಹಿಳೆಯರಿಗೆ ಈ ಬಾರಿ ಜವಾಬ್ಧಾರಿ ವಹಿಸಲಾಗಿದೆ. .
ನಳಿನ್ ಕುಮಾರ್ ಕಟೀಲ್ ಅವಧಿಯಲ್ಲಿನ ರಾಜ್ಯ ಉಪಾಧ್ಯಕ್ಷರ ಪೈಕಿ ಎಂ.ರಾಜೇಂದ್ರ ಮಾತ್ರ ಈ ಬಾರಿಯೂ ಉಪಾಧ್ಯಕ್ಷರಾಗಿದ್ದಾರೆ. ನಳಿನ್ ಕುಮಾರ್ ಕಟೀಲ್ ಸೈನ್ಯದಲ್ಲಿದ್ದ ನಾಲ್ವರು ಪ್ರಧಾನ ಕಾರ್ಯದರ್ಶಿಗಳ ಬದಲಾವಣೆ ಮಾಡಲಾಗಿದೆ.




















































ಪದಾಧಿಕಾರಿಗಳ ನೇಮಕದ ಹೈಲೈಟ್ಸ್: