ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ವಿ.ಆರ್.ತಿರುವಡಿ ಅವರು ಸಂಶೋಧಿಸಿ ಪ್ರಕಟಿಸಿರುವ ‘ಲಾಲ್ ಬಾಗ್ – ಸುಲ್ತಾನ್ಸ್ ಗಾರ್ಡನ್ ಟು ಪಬ್ಲಿಕ್ ಪಾರ್ಕ್’ ಪುಸ್ತಕವನ್ನು ಬಿಡುಗಡೆ ಮಾಡಿದರು.
ಪರಿಸರ ತಜ್ಞ ಹಾಗೂ ಬೆಂಗಳೂರು ಎನ್ವಿರಾನ್ ಮೆಂಟ್ ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ರೆಡ್ಡಿ, ಬೆಂಗಳೂರು ದಕ್ಷಿಣ ಬಿ.ಜೆ.ಪಿ ರೈತ ಮೋರ್ಚಾ ಕಾರ್ಯದರ್ಶಿ ವಿದ್ಯಾ.ವಿ.ಎಂ., ಬಿ.ಇ. ಟಿ ಸಂಸ್ಥೆಯ ಟ್ರಸ್ಟಿಗಳಾದ ಮಾಯಾ ಚಂದ್ರ, ನಿರ್ಮಲಾ ಗೌಡ,ಆರ್ಟ್ ಆಫ್ ಲಿವಿಂಗ್‌ನ ಉದಯ್ ಕುಮಾರ್ ಕೊಳ್ಳಿಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.