ಪಾಟ್ನ: ಭರವಸೆ ಹುಸಿಗೊಳಿಸಿದ ಪ್ರಧಾನಿ ವಿರುದ್ಧ ಫೆಬ್ರುವರಿ 13ರಂದು ರಾಜ್ಯದ ವಿವಿಧೆಡೆಯ ರೈತರು ದೆಹಲಿ ಚಲೋ ನಡೆಸಲಿದ್ದಾರೆ ಎಂದು ಬಿಹಾರ್ ಕೃಷಿ ಪರಿವಾರ್ ಸಂಘಟನೆ, ಘೋಷಿಸಿದೆ.
ದೇಶದ ವಿವಿಧ ರಾಜ್ಯಗಳ ನೂರಾರು ರೈತ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಬಿಹಾರ್ ರಾಜ್ಯದ ನಳಂದ ಜಿಲ್ಲೆಯ ಚಾಂಡಿ ರೈತ ಸಮಾವೇಶದಲ್ಲಿ, ರೈತರ ಬಾರಿ ಹೋರಾಟ ಫೆಬ್ರವರಿ 13 ರಂದು ರೈತರ ದೆಹಲಿ ಚಲೋ ಆಂದೋಲನ ನಡೆಸಲು ತೀರ್ಮಾನಿಸಲಾಯಿತು
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು ಡಾ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು, ದೇಶದ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು, ವಿಶ್ವ ವ್ಯಾಪಾರ ಒಪ್ಪಂದದಿಂದ ಭಾರತ ಸರ್ಕಾರ ಹೊರಬರಬೇಕು, ದೇಶಾದ್ಯಂತ 60 ವರ್ಷ ತುಂಬಿದ ರೈತರಿಗೆ ಕನಿಷ್ಠ 10 ಸಾವಿರ ಪಿಂಚಣಿ ಯೋಜನೆ ಬರಬೇಕು ಎಂಬ ಒತ್ತಾಯಗಳ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರ ಕೈಗೊಳ್ಳದಿದ್ದರೆ ಫೆಬ್ರವರಿ 13ರಂದು ಎಲ್ಲ ರಾಜ್ಯಗಳಿಂದ ಲಕ್ಷಾಂತರ ರೈತರು ಟ್ಯಾಕ್ಟರ್ ರ್ಯಾಲಿ ಮೂಲಕ ದೆಹಲಿ ಚಲೋ ಆಂದೋಲನ ನಡೆಸಲು ಎಸ್‌ಕೆಎಂ (ರಾಜಕೀಯೆತರ) ಸಂಘಟನೆ ತೀರ್ಮಾನಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಭಾನುವಾರ ಪಾಟ್ನಾದ ನಳಂದ ಜಿಲ್ಲೆಯ ಚಂಡಿ ಮೈದಾನದಲ್ಲಿ ನಡೆದ ಬಿಹಾರ್ ಕೃಷಿ ಪರಿವಾರ್ ಸಮಾವೇಶದಲ್ಲಿ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ಕುರುಬೂರ್ ಶಾಂತಕುಮಾರ್, ಸ್ವಾತಂತ್ರ್ಯ ಬಂದ 76 ವರ್ಷಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ರೈತರನ್ನ ಭಿಕಾರಿಗಳಾಗಿ ಮಾಡಿವೆ ಈಗ ಆತ್ಮಹತ್ಯೆಗೆ ತಳ್ಳುತ್ತಿವೆ ಕೃಷಿ ಕ್ಷೇತ್ರ ನಾಶ ಮಾಡಲು ಕೈಗಾರಿಕೋದ್ಯಮಗಳಿಗೆ ಮಣೆಹಾಕುತ್ತಿವೆ, ಸಂಘಟಿತರಾಗಿ ರಾಜಕೀಯ ತರವಾಗಿ ಹೋರಾಟ ಮಾಡಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧಾರ ಮಾಡಿ ಸಂಘಟನೆ ನಡೆಸುತ್ತಿದೆ. ರೈತರು ಎಚ್ಚೆತ್ತುಕೊಂಡು ರಾಜಕೀಯ ಪಕ್ಷಗಳ ವಿರುದ್ಧ ಪ್ರಬಲವಾಗಿ ತೊಡೆ ತಟ್ಟಲು ನೀವೆಲ್ಲ ಬನ್ನಿ ಎಂದು ರೈತ ಸಮಾವೇಶದಲ್ಲಿ ಕರೆ ನೀಡಿದರು.
ಸಮಾವೇಶದಲ್ಲಿ ಭಾಗವಹಿಸಿದ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರುಗಳಾದ
ಪಂಜಾಬನ ಬಲದೇವ್ ಸಿಂಗ್ ಶಿರಸಾ, ಉತ್ತರ ಪ್ರದೇಶದ ಹರಪಾಲಬಿಲಾರಿ, ಬಿಲಾರಿ, ಇನ್ನು ಮುಂತಾದವರು ಸಭೆಯಲ್ಲಿ ಮಾತನಾಡಿದರು ಸಮಾವೇಶದ ಸಂಚಾಲಕ ಅರುಣ್ ಶಿನ್ಹಾ ಮಾತನಾಡಿ ಬಿಹಾರ್ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ದೆಹಲಿ ಚಲೋ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಬರುವುದಾಗಿ ಭರವಸೆ ನೀಡಿದರು