(ವರದಿ: ಸುರೇಶ್ ಬಾಬು)
ಬೆಂಗಳೂರು: ಲಗೇಜ್ ವಿಚಾರಕ್ಕೆ ಕೆಎಸ್.ಆರ್.ಟಿ.ಸಿ. ಬಸ್ ಕಂಡಕ್ಟರ್ ಮೇಲೆ ಪ್ರಯಾಣಿಕರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಲ್ಲೆಗೊಳಗಾದ ಕಂಡಕ್ಟರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೊಡ್ಡಬಳ್ಳಾಪುರ ನಗರದ ಕೆಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಬೆಂಗಳೂರಿಗೆ ಹೊರಟಿದ್ದ ಬಸ್’ನಲ್ಲಿ ಲಗೇಜ್ ವಿಚಾರಕ್ಕೆ ಪ್ರಯಾಣಿಕರ ಗುಂಪೊಂದು ಬಸ್ ಕಂಡಕ್ಟರ್ ಜೊತೆ ಜಗಳವಾಡಿದೆ. ವಾಗ್ವಾದ ವಿಕೊಪ್ಪ ತಿರುಗಿದ್ದು ಉದ್ರಿಕ್ತ ಗುಂಪು ಕಂಡಕ್ಟರ್ ಹರೀಶ್ ಮೇಲೆ ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ಹರೀಶ್ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ದೃಶ್ಯ ಸಾರ್ವಜನಿಕರ ಮೊಬೈಲ್’ನಲ್ಲಿ ಸೆರೆಯಾಗಿದೆ. ವೀಡಿಯೋ ಮಾಡುತ್ತಿದ್ದವರ ಮೇಲೂ ಹಲ್ಲೆ ನಡೆದಿದೆ. ಈ ಘಟನೆ ಕುರಿತಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.