. 📝 ಅನಂತ ಪದ್ಮನಾಭ ಆಸ್ರಣ್ಣ (ಕಟೀಲು ಕ್ಷೇತ್ರದ ಹಿರಿಯ ಅರ್ಚಕರು
ಸ್ವಾತಂತ್ರ್ಯೋತ್ತವ ದಿನ.. ಎಲ್ಲೆಲ್ಲೂ ತಿರಂಗದ ಆಕರ್ಷಣೆ.. ಕಟೀಲು ಕ್ಷೇತ್ರದಲ್ಲಿ ಅಧಿದೇವತೆ ಕಟೀಲು ದುರ್ಗಾಪರಮೇಶ್ವರಿ ದೇವಿ ಕೂಡಾ ರಾಷ್ಟ್ರಧ್ವಜದ ಅಲಂಕಾರದಿಂದ ಕಂಗೊಳಿಸುತ್ತಿದ್ದಾಳೆ. ಬ್ರಮರಾಂಬೆ ಇಂದು ಭಾರತಾಂಭೆಯಾಗಿರುವುದೇ ವಿಶೇಷ..
ತಾಯಿ ಮಕ್ಕಳನ್ನು ಪೋರೆದಂತೆ ಸ್ವ ಇಚ್ಛೆಯಂತೆ ವಿಹರಿಸಲು ಬಿಟ್ಟಂತೆ, ತಪ್ಪಿದ್ದಲ್ಲಿ ತಿದ್ದುವಂತೆ, ಜಗನ್ನಿಯಾಮಕ ಕಟೀಲ್ ಅಮ್ಮ ಭಾರತಮಾತೆಯ ಪ್ರಜೆಗಳಾಗಿ ಸರ್ವಾರ್ಥವನ್ನ ಹೊಂದುವುದರೊಂದಿಗೆ, ಸಜ್ಜನರಿಗೆ ಅವರ ಕಷ್ಟ ದೂರ ಮಾಡುವುದರೊಂದಿಗೆ ನಿರಂತರ ರಕ್ಷಣೆ ಮಾಡುವುದರೊಂದಿಗೆ ಪ್ರಣತರಿಗೆ ಪ್ರಸೀದಳಾಗಿದ್ದಾಳೆ.
ಭಾರತಾಂಬೆಯ ಪ್ರಜೆಗಳಿಗೆ ದುಷ್ಟರಿಂದ ಭಯೋತ್ಪಾದಕರಿಂದ ಬರುವ ಕಷ್ಟ ದೂರ ಮಾಡಿ ಸ್ವತಂತ್ರವಾಗಿ ಭಾರತ ದೇಶದಲ್ಲಿ ದೇಶಪ್ರೇಮದೊಂದಿಗೆ ಭಾರತ ಪ್ರಜೆಗಳು ಜೀವಿಸುವಂತಾಗಲಿ. ನಮ್ಮ ಸಂಸ್ಕೃತಿ, ಸಂಸ್ಕಾರ, ಸನಾತನ ಧರ್ಮ ಉಳಿಯುವಂತಾಗಲಿ.
ಮಹಾಪೂಜೆಯ ಮಹಾವೈಭವದ ದೃಶ್ಯ
https://youtu.be/-AJLeuzLR40
ಎಲ್ಲರಿಗೂ ಆಯುರಾರೋಗ್ಯ, ಸಂಪತ್ತು, ನೆಮ್ಮದಿ ಪ್ರಾಪ್ತಿಯಾಗಲಿ. ಕಟೀಲು ದುರ್ಗಾಪರಮೇಶ್ವರಿ ಅನುಗ್ರಹ ಕಟಾಕ್ಷ ಸಿದ್ಧಿಯಾಗಲಿ ಹಿಂದ ವ ಸೋದರ ಸರ್ವೇ ಎಂಬ ಎಂಬ ಧ್ಯೇಯ ವಾಕ್ಯ, ಐಕ್ಯಮತ್ಯ ನಿರ್ವೈರತ್ವ್ ಹಿಂದೂಗಳಲ್ಲಿ ಸಂಘ ಶಕ್ತಿ ಹೆಚ್ಚಾಗಲಿ. ಅಮೃತೊತ್ಸವ ಆಚರಿಸುವ ಭಾರತಾಂಬೆಯ ಪುತ್ರರಿಗೆ ಅಮೃತಮಯ ಸ್ವಾತಂತ್ರ್ಯ ಲಭಿಸಲಿ.