ಬೆಂಗಳೂರು: ನಾಡು ಕಂಡ ಅಪರೂಪದ ಅಧಿಕಾರಿ ಶಿವಪ್ಪ ಲಮಾಣಿ ಅವರ ಹುಟ್ಟುಹಬ್ಬವನ್ನು ವಿವಿಧ ಸಂಘಟನೆಗಳು ವಿಶಿಷ್ಠವಾಗಿ ಆಚರಿಸಿದವು.
ಹಿರಿಯ ಕೆಎಎಸ್ ಅಧಿಕಾರಿ ಶಿವಪ್ಪ ಲಮಾಣಿ ಅವರು ಗುರುವಾರ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಯುವಜನ ಪಾಳಯದಲ್ಲಿ ವಿಶಿಷ್ಟ ಸೇವೆ, ಸಾಮಾಜಿಕ ಕಳಕಳಿ ಮೂಲಕ ಜನಾನುರಾಗಿ ಅಧಿಕಾರಿ ಎನಿಸಿಕೊಂಡಿರುವ ಶಿವಪ್ಪ ಲಮಾಣಿ ಅವರು ದಲಿತರು ಹಾಗೂ ಶೋಷಿತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದವರು. ಪ್ರಸ್ತುತ ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರರಾಗಿರುವ ಶಿವಪ್ಪ ಲಮಾಣಿ ಅವರ ಹುಟ್ಟುಹಬ್ವದ ಸಂದರ್ಭದಲ್ಲಿ ವಿವಿಧ ಜನಪರ ಸಂಘಟನೆಗಳು ಇಡೀದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ತಡರಾತ್ರಿವರೆಗೂ ಕಾರ್ಯಕ್ರಮಗಳು ಗಮನಸೆಳೆದವು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಮಾನವ ಹಕ್ಕು ಹೋರಾಟಗಾರರು ವಿಶೇಷ ಕಾರ್ಯಕ್ರಮ ಮೂಲಕ ತಹಶಿಲ್ದಾರ್ ಶಿವಪ್ಪ ಲಮಾಣಿ ಅವರ ಜನಪರ ಸೇವೆಗೆ ಸ್ಫೂರ್ತಿಯಾದರು. ಇಂಡಿಯನ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ ಉಪಾಧ್ಯಕ್ಷ ಮಹಮ್ಮದ್ ರಫೀಕ್, ಮಾನವ ಹಕ್ಕು ಕಾರ್ಯಕರ್ತ ಸುಭಾನ್ ಷರೀಫ್ ಸಹಿತ ಹಲವರು ಈ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಪ್ಪ ಲಮಾಣಿ ಅವರಿಗೆ ಶುಭ ಹಾರೈಸಿದರು.
ಇದೇ ವೇಳೆ, ಅಧಿಕಾರಿ ಶಿವಪ್ಪ ಲಮಾಣಿ ಹುಟ್ಟುಹಬ್ಬ ಅಂಗವಾಗಿ ಮಹಮ್ಮದ್ ರಫೀಕ್ ನೇತೃತ್ವದಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.