ಗದಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಸಿಎಂ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿರೋ ಬಗ್ಗೆ ವಾರ್ತಾ ಮತ್ತು ಸಣ್ಣ ಕೈಗಾರಿಕೆ ಸಚಿವ ಸಿ ಸಿ ಪಾಟೀಲ್ ಪ್ರತಿಕ್ರಯಿಸಿದ್ದಾರೆ.
ಗದಗನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವ ಸಿ.ಸಿ.ಪಾಟೀಲ, ಸ್ವಪಕ್ಷದ ಸಚಿವ ಕೆ ಎಸ್ ಈಶ್ವರಪ್ಪ ರಾಜ್ಯಪಾಲರಿಗೆ ದೂರು
ನೀಡಬಾರದಿತ್ತು.ರಾಜ್ಯಾಪಾಲರಿಗೆ ದೂರು ಕೊಡೋದ್ರಿಂದ ಏನೂ ಪ್ರಯೋಜನ ಆಗೋದಿಲ್ಲ. ವಿನಾಕಾರಣ ಚರ್ಚೆಗೆ ಗ್ರಾಸ ಮಾಡಿಕೊಟ್ಟ ಈಶ್ವರಪ್ಪನವರ ನಡೆ ಸರಿಯಲ್ಲ ಎಂದರು.
ಸಿಎಂ ಬಿ ಎಸ್ ವೈ ಹಾಗೂ ಈಶ್ವರಪ್ಪ ಅವರು ಒಂದೇ ಜಿಲ್ಲೆಯವರು. ಅಭಿಪ್ರಾಯ ಬೇಧಗಳು ಇದ್ರೆ ಬಗೆಹರಿಸಿಕೊಳ್ಳಬೇಕಿತ್ತು. ರಾಜ್ಯಪಾಲರಿಗೆ ಹಾಗೂ ಪಕ್ಷದ ವರಿಷ್ಠರಿಗೆ ದೂರು ಕೊಟ್ಟಿದ್ದು ಸರಿಯಾದ ಕ್ರಮವಲ್ಲ. ಅದು ಸಹ ಉಪ ಚುನಾವಣೆ ವೇಳೆಯಲ್ಲಿ ಇಂತಹ ಹೇಳಿಕೆ ಪಕ್ಷಕ್ಕೆ ಮುಜಗರ ಆಗುತ್ತೆ. ಹೀಗಾಗಿ ಸಚಿವ ಕೆ ಎಸ್ ಈಶ್ವರಪ್ಪನವರ ನಡೆಯನ್ನು ಖಂಡಿಸುತ್ತೇನೆ ಅಂತಾ ಹೇಳಿಕೆ ನೀಡಿದರು.
ಈಶ್ವರಪ್ಪ ಪರವಾಗಿ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ ಹಿನ್ನೆಲೆ, ಪಕ್ಷಕ್ಕೆ ಮುಜುಗುರ ತರುವಂತ ಹೇಳಿಕೆ ಕೊಟ್ರೆ ಈಶ್ವರಪ್ಪ ಒಳ್ಳೆಯವನು, ಕಾಂಗ್ರೆಸನ್ನು ಟೀಕೆ ಮಾಡಿದರೆ ಈಶ್ವರಪ್ಪನಿಗೆ ಮೆದುಳಿಲ್ಲ ಅನ್ನೋದು ಸಿದ್ದರಾಮಯ್ಯನವರ ವ್ಯಕ್ತಿತ್ವವನ್ನ ತೋರಿಸುತ್ತೆ. ಅದನ್ನ ನೀವೇ ತೂಕ ಮಾಡಿ ಅಂತ ಸಿದ್ಧರಾಮಯ್ಯಗೆ ಸಿಸಿ ಪಾಟೀಲ್ ನೀಡಿದರು.