ನವದೆಹಲಿ: ಕೇಂದ್ರದ ಅನುದಾನ ವಿಚಾರದಲ್ಲಿ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಪ್ರತಿಭಟನೆಗಳ ಸರಣಿ ಆರಂಭವಾಗಿದೆ. ಕರ್ನಾಟಕಕ್ಕೆ ತೆರಿಗೆ ಹಣ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉಪಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಬಿಜೆಪಿ ಸಂಸದರೂ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದರು. ದೆಹಲಿಯಲ್ಲಿ ಸಂಸತ್ ಭವನ ಬಳಿ ಜಮಾಯಿಸಿದ ಬಿಜೆಪಿ ಸಂಸದರು ಕಾಂಗ್ರೆಸ್ ಸರ್ಕಾರ ದುರಾಡಳಿತದಿಂದ ಕರ್ನಾಟಕದ ಜನರು ಬೇಸತ್ತಿದ್ದಾರೆ ಎಂದು ಆರೋಪಿಸಿದರು.
Joined Karnataka's BJP MPs at Parliament to protest against Congress Govt's misgovernance. Modi govt increased Karnataka's funding by 240% in a decade, from Rs 81,000 Cr under UPA to Rs 2.82 lakh Cr under NDA. Congress's “Delhi Chalo” prioritises self-interest over state welfare. pic.twitter.com/xZJIwNlM6X
— P C Mohan (Modi Ka Parivar) (@PCMohanMP) February 7, 2024





















































