ಬೆಂಗಳೂರು: ಅಸಂಘಟಿತ ಕಾರ್ಮಿಕರ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗೆ ದೇಶದಲ್ಲಿಯೇ ಪ್ರಪ್ರಥಮವಾಗಿ Karnataka Motor Transport and other Allied workers Social Security Welfare ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ. ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಸ್ತು ಎಂದಿದೆ.
ಈ ಮಹತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ಸಿಕ್ಕಿದೆ. ಕಾರ್ಮಿಕ ಇಲಾಖೆಯ ಈ ಯೋಜನೆಗೆ ಅನುಮತಿ ಸಿಗುತ್ತಿದ್ದಂತೆಯೇ ಶ್ರಮಿಕ ವರ್ಗದಲ್ಲಿ ಸಂತಸ ಮನೆಮಾಡಿದೆ.
ಅಸಂಘಟಿತ ವಲಯದ ಕಾರ್ಮಿಕರ ಹಿತಕಾಯಲು ಜಾರಿಗೆ ತಂದಿರುವ ಈ ಯೋಜನೆಯು ಕರ್ನಾಟಕ ಸರ್ಕಾರದ ಕಾರ್ಮಿಕರ ಬಗೆಗಿನ ಕಾಳಜಿಗೆ ನಿದರ್ಶನವಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕಾರ್ಮಿಕ ಸಚಿವ.ಸಂತೋಷ್ ಲಾಡ್ ಅವರ ಪ್ರಯತ್ನದೊಂದ ಫಲವಾಗಿ ಯೋಜನೆ ಜಾರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಖಾಸಗಿ ವಾಣಿಜ್ಯ ಸಾರಿಗೆ ನೌಕರರ ಬಹುವರ್ಷಗಳ ಬೇಡಿಕೆ ಇದಾಗಿದ್ದು,ಇತ್ತೀಚಿಗಿನ ಮುಷ್ಕರದ ಸಮಯದಲ್ಲೂ ಈ ಬೇಡಿಕೆಯನ್ನು ಸಂಘಟನೆಗಳು ಮುಂದಿಟ್ಟಿವೆ. ಈ ಬೇಡಿಕೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ವೀಡಿಯೋ ನೋಡಿ.. ಟೆಂಪೋ ಮೇಲೆ ಆನೆ ಸವಾರಿ; ಅಸಲಿಯತ್ತು ಬಗ್ಗೆ ಭಾರೀ ಚರ್ಚೆ..
ಅಸಂಘಟಿತ ಕಾರ್ಮಿಕರಲ್ಲಿ ಪ್ರಮುಖ ವರ್ಗವಾದ ಖಾಸಗಿ ವಾಣಿಜ್ಯ ಸಾರಿಗೆ ವಾಹನಗಳಾದ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕಾಬ್, ಲಾರಿ ಇತ್ಯಾಧಿ ವರ್ಗಗಳ ಕಾರ್ಮಿಕರ ಹೆಚ್ಚಿನ ವೃತ್ತಿಯು ದೈಹಿಕ ಶ್ರಮ ಅನಿರಿಕ್ಷಿತ ಅಪಘಾತಕ್ಕೆ ತುತ್ತಾಗುವ ವೃತ್ತಿಯಾಗಿದೆ. ಕುಟುಂಬದಲ್ಲಿ ದುಡಿಯುವ ವ್ಯಕ್ತಿಯು ಅಪಘಾತದಿಂದ ನಿಧನರಾದಲ್ಲಿ ಅಥವಾ ಶಾಶ್ವತ ಅಂಗವೈಕಲ್ಯವಾದಲ್ಲಿ ಅವರನ್ನು ಅವಲಂಭಿಸಿರುವ ಕುಟುಂಬವು ಆರ್ಥಿಕವಾಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಮೋಟಾರು ಸಾರಿಗೆ ವಾಹನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬುಕ್ಕಿಂಗ್ ಕ್ಲರ್ಕ್, ನಗದು ಕರ್ಕ್ ಗಳು ಮೋಟಾರು ಗ್ಯಾರೇಜುಗಳಲ್ಲಿ ತೊಡಗಿರುವ ಮೆಕಾನಿಕ್, ಟೈಯರ್ ರಿಟ್ರೇಡಿಂಗ್ , ಪಂಚರ್ ಶಾಪ್ ಗಳಲ್ಲಿ ಕೆಲಸ ಮಾಡುವರು ಹಾಗೂ ಆಟೋ ಮೊಬೈಲ್ ಬಾಡಿ ಬಿಲ್ಡಿಂಗ್ ನಲ್ಲಿ ಕಾರ್ಯ ನಿರ್ವಹಿಸುವುವವರಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ..ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಬಗ್ಗೆ ಗೊತ್ತಾ?
ಈ ಅಸಂಘಟಿತ ಶ್ರಮಿಕ ವರ್ಗದ ಕಾರ್ಮಿಕರಲ್ಲಿ ಗರಿಷ್ಟ ಸಂಖ್ಯೆಯ ಕಾರ್ಮಿಕರನ್ನು ಹೊಂದಿರುವ ಖಾಸಗಿ ವಾಣಿಜ್ಯ ಸಾರಿಗೆ ವಾಹನ ಕಾರ್ಮಿಕರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ದುರ್ಬಲರಾಗಿರುತ್ತಾರೆ. ಇಂತಹವರ ಹಿತ ಕಾಪಾಡಲು ಈ ಯೋಜನೆಯನ್ನು ಜಾರಿಗೆ ತರುವ ಮೂಲಕ ಫಲಾನುಭವಿಗಳಿಗೆ ಅಪಘಾತ ಪರಿಹಾರ, ನೈಸರ್ಗಿಕ ಮರಣ ಪರಿಹಾರ ಹಾಗೂ ಅಂತ್ಯ ಸಂಸ್ಕಾರ ವೆಚ್ಚ, ವಿವಾಹ ಭತ್ಯೆ, ಫಲಾನುಭವಿ / ಫಲಾನುಭವಿಯ ಪತ್ನಿಗೆ ಹೆರಿಗೆ ಭತ್ಯೆ, ಮಕ್ಕಳಿಗೆ ಶೈಕ್ಷಣಿಕ ಸಹಾಯಕ, ಭವಿಷ್ಯ ನಿಧಿ, ವಸತಿ ಸೌಲಭ್ಯ ಹಾಗೂ ವೃದ್ದಾಶ್ರಮ ಇತ್ಯಾದಿ ಸೌಲಭ್ಯಗಳನ್ನು ಹಂತ-ಹಂತವಾಗಿ ಒದಗಿಸುವ ಸದುದ್ದೇಶವನ್ನು ಹೊಂದಿದೆ. ಅಂದಾಜು ವಾರ್ಷಿಕ ಸುಮಾರು ರೂ.270 ಕೋಟಿಗಳ ನಿಧಿಯನ್ನು ಮೀಸಲಿರಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದವರು ಮಾಹಿತಿ ಒದಗಿಸಿದ್ದಾರೆ.
ನಿಧಿ ಸಂಗ್ರಹಣೆ, ನಿರ್ವಹಣೆ ಹಾಗೂ ಫಲಾನುಭವಿಗಳಿಗೆ ಸಾಮಾಜಿಕ ಸೌಲಭ್ಯ ವಿತರಣೆಗಾಗಿ ಪ್ರತ್ಯೇಕ Karnataka Motor Transport and other allied workers social security welfare Board ರಚಿಸಲು ಸಹ ಉದ್ದೇಶಿಸಲಾಗಿದೆ ಎಂದವರು ತಿಳಿಸಿದ್ದಾರೆ.