ಬೆಂಗಳೂರು: ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮದರಸಾ ಅಥವಾ ಹಿಂದೂಯೇತರ ಧರ್ಮಗಳ ಸಂಸ್ಥೆಗಳಿಗೆ ಹಣ ಪಾವತಿಯಾಗಿತ್ತಿದ್ದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಆದರೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮದರಸಾ ಅಥವಾ ಇನ್ನಿತರ ಮುಸ್ಲಿಂ ಧರ್ಮದವರಿಗೆ ಹಣ ಸಂದಾಯವಾಗಿಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಸಹಿತ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡುತ್ತಿದ್ದರು.
ಇದೀಗ ರಾಜ್ಯ ಸರ್ಕಾರದ ನೈಜ ವೈಖರಿ ಹೇಗಿತ್ತು ಎಂಬ ಸಂಗತಿ ಬಯಲಾಗಿದೆ. ಕೆಲ ತಿಂಗಳ ಹಿಂದಿನವರೆಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮದರಸಾ ಹಾಗೂ ಇನ್ನಿತರ ಅನ್ಯ ಧರ್ಮೀಯರಿಗೆ ಹಣ ಪಾವತಿಸಲಾಗುತ್ತಿತ್ತು ಎಂಬ ಸಂಗತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಬರೋಬ್ಬರಿ 757 ಹಿಂದೂಯೇತರ ಸಂಸ್ಥೆಗಳಿಗೆ 48,000 ರೂಪಾಯಿಗಳಂತೆ ಸುಮಾರು 3,63,36,000 ರೂಪಾಯಿಗಳನ್ನು ಕರ್ನಾಟಕ ಸರ್ಕಾರ ತಸ್ತಿಕ್ ಅನುದಾನ ರೂಪದಲ್ಲಿ ನೀಡುತ್ತಿತ್ತು ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಮುಜರಾಯಿ ಇಲಾಖೆ ನೀಡಿರುವ ದಾಖಲೆ ಹೇಳುತ್ತದೆ.