ಬೆಂಗಳೂರು: ‘ಬಿಜೆಪಿಗೆ ಸ್ಪಷ್ಟ ಬಹುಮತ ಬಂದರೆ ಇವಿಎಂ ಹ್ಯಾಕ್ ಆಗಿದೆ ಎಂದು ಬೊಬ್ಬೆಡದಿದ್ದರೆ ಸಾಕು’ ಎಂದು ಬಿಜೆಪಿ ಹಿರಿಯ ನಾಯಕ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಈ ಕುರಿತಂತೆ ಅವರು ಮಾಡಿರುವ ಟ್ವೀಟ್ ಗಮನಸೆಳೆದಿದೆ.
ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದ್ದು ಜನತೆ ಇರೀಗ ಸೋಲ-ಗೆಲುವಿನ ಲೆಕ್ಕಾಚಾರದಲ್ಲಿ ನಿರತರಾಗಿರುವಂತೆಯೇ ಮತಗಟ್ಟೆ ಸಮೀಕ್ಷೆಗಳು ಫಲಿತಾಂಶದ ಕುತೂಹಲವನ್ನು ಹೆಚ್ಚಿಸಿದೆ.
ಎಕ್ಸಿಟ್ ಪೋಲ್ ಕುರಿತಂತೆ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ‘ಚುನಾವಣೆ ಪೂರ್ವ ಸಮೀಕ್ಷೆ ನೋಡಿ JDS ಕಿಂಗ್ ಮೇಕರ್ ಆಗುವ ಆಸೆ ಹೊಂದಬಹುದು. ಕಾಂಗ್ರೆಸ್ ಅಧಿಕಾರ ಪಡೆಯಲಿದ್ದೇವೆ ಎಂದು ಸಂಭ್ರಮಿಸಬಹುದು. ಆದರೆ, ಶನಿವಾರ ಮಧ್ಯಾಹ್ನದ ಹೊತ್ತಿಗೆ ಲೆಕ್ಕ ಹೊರಬಿದ್ದಾಗ ಬಿಜೆಪಿಗೆ ಸ್ಪಷ್ಟ ಬಹುಮತ ಬಂದರೆ ಇವಿಎಂ ಹ್ಯಾಕ್ ಆಗಿದೆ ಎಂದು ಬೊಬ್ಬೆಡದಿದ್ದರೆ ಸಾಕು’ ಎಂದಿದ್ದಾರೆ.
ಚುನಾವಣೆ ಪೂರ್ವ ಸಮೀಕ್ಷೆ ನೋಡಿ JDS ಕಿಂಗ್ ಮೇಕರ್ ಆಗುವ ಆಸೆ ಹೊಂದಬಹುದು. ಕಾಂಗ್ರೆಸ್ ಅಧಿಕಾರ ಪಡೆಯಲಿದ್ದೇವೆ ಎಂದು ಸಂಭ್ರಮಿಸಬಹುದು. ಆದರೆ, ಶನಿವಾರ ಮಧ್ಯಾಹ್ನದ ಹೊತ್ತಿಗೆ ಲೆಕ್ಕ ಹೊರಬಿದ್ದಾಗ ಬಿಜೆಪಿಗೆ ಸ್ಪಷ್ಟ ಬಹುಮತ ಬಂದರೆ ಇವಿಎಂ ಹ್ಯಾಕ್ ಆಗಿದೆ ಎಂದು ಬೊಬ್ಬೆಡದಿದ್ದರೆ ಸಾಕು.
ಬಿಜೆಪಿ ಒಂದೇ ಭರವಸೆ…— Kota Shrinivas Poojari (ಮೋದಿಜೀ ಪರಿವಾರ) (@KotasBJP) May 11, 2023