ಬೆಂಗಳೂರು: ಹಿಂದಿನ ಸರ್ಕಾರದ ಅವಾಂತರಕ್ಕೆ ಬ್ರೇಕ್ ಹಾಕಲು ಸಜ್ಜಾಗಿರುವ ನೂತನ ಸಿದ್ದರಾಮಯ್ಯ ಸರ್ಕಾರ ಇದೀಗ ನಿಗಮ-ಮಂಡಳಿಗಳ ಆರ್ಥಿಕ ಅಶಿಸ್ತಿಗೂ ಅಂಕುಶ ಹಾಕಲು ಕ್ರಮ ಕೈಗೊಂಡಿದೆ.
ದಿಢೀರ್ ಆದೇಶವೊಂದರಲ್ಲಿ ಎಲ್ಲಾ ನಿಗಮ ಮಂಡಳಿಗಳಿಗೆ ಆರ್ಥಿಕ ಅನುದಾನವನ್ನು ತಡಡಹಿಡಿಯಲಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಎಲ್ಲಾ ಕಾಮಗಾರಿಗಳ ಅನುದಾನ ಬಿಡುಗಡೆಗೆ ಸರ್ಕಾರ ತಡೆ ನೀಡಿದೆ. ಇಲಾಖೆಗಳ, ನಿಗಮ ಮಂಡಳಿಗಳ, ಪ್ರಾಧಿಕಾರಗಳ ಕಾಮಗಾರಿಗೆ ಸಂಬಂಧಿಸಿದ ಹಣ ಬಿಡುಗಡೆಯನ್ನು ಹಾಗೂ ಹಣ ಪಾವತಿಯನ್ನು ತಡೆಹಿಡಿಯುವಂತೆ ಆರ್ಥಿಕ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್ ಅವರು ಸೋಮವಾರ ಸುತ್ತೋಲೆ ಹೊರಡಿಸಿದ್ದಾರೆ.