ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸಂಪುಟಕ್ಕೆ ಇಂದು ಬರೋಬ್ಬರಿ 24 ಸಚಿವರು ಸೇರ್ಪಡೆಯಾಗಿದ್ದರೆ. ಮೊದಲ ಬಾರಿಯ ವಿಸ್ತರಣೆ ಸಂದರ್ಭದಲ್ಲೇ ಸಂಪುಟ ಪರಿಪೂರ್ಣವಾಗಿದೆ. ರಾಜಭವನದಲ್ಲಿ 24 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲಾಟ್ ಅವರು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ನೂತನ ಸಂಪುಟ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಕೆಲವು ಸ್ಮರಣೀಯ ಕ್ಷಣಗಳು. pic.twitter.com/YPbZh83p75
— Siddaramaiah (@siddaramaiah) May 27, 2023
ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸಹಿತ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಈ ಪದಗ್ರಹಣ ಸಮಾರಂಭ ನೆರವೇರಿತು.