ಹತ್ತೂರಿನ ಮಕ್ಕಳು.. ಅದ್ಧೂರಿಯ ದೀಪಾವಳಿ.. ವಿವಿಧ ರಾಜ್ಯಗಳ ಸಾಂಸ್ಕೃತಿಕ ಸಮ್ಮಿಳನ.. ಮಕ್ಕಳೊಂದಿಗೆ ಮಕ್ಕಳಾದ ಶಿಕ್ಷಕರು.. ಹೀಗೆ ಸಾಗಿತ್ತು ಈ ಮಹಾಪರ್ವ..
ಕೆಲವು ದಿನಗಳ ಹಿಂದೆ ಅನನ್ಯ, ಅಭೂತಪೂರ್ವ ‘ಓಣಂ’ ಮೂಲಕ ಗಮನ ಸೆಳೆದ ಮಂಗಳೂರಿನ ‘ಕರಾವಳಿ’ ಕಾಲೇಜು ಸಮೂಹದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಇದೀಗ ದೀಪಗಳ ಹಬ್ವವನ್ನು ಅದ್ಧೂರಿಯಾಗಿ ಆಚರಿಸಿ ದೇಶದ ಗಮನಸೆಳೆದರು.
ಕೆಲವು ದಿನಗಳ ಹಿಂದಷ್ಟೇ ಕರಾವಳಿ ಕಾಲೇಜಿನಲ್ಲಿ ‘ಓಣಂ’ ಆಚರಿಸಲಾಯಿತು. ಕೇರಳೀಯರತ್ತ ಕೇಂದ್ರೀಕರಿಸಿರುವ ಈ ಓಣಂ ಅಂದರೆ, ಪುರಾಣದ ಪ್ರತಿಬಿಂಬ. ‘ಮಹಾಬಲಿ’ಯನ್ನು ಆಹ್ವಾನಿಸುವ ಪರ್ವಕಾಲ. ಹಾಗೆಂದಾಗ ‘ಮಹಾಬಲಿ’ ಬರುವ ಅದ್ಧೂರಿ ಕ್ಷಣವೂ ಅರ್ಥಪೂರ್ಣ ಆಗಿರಬೇಕಲ್ಲವೇ? ಅದೇ ಅರ್ಥಪೂರ್ಣ ಸನ್ನಿವೇಶವು ‘ಕರಾವಳಿ ದೀಪಾವಳಿ’ಯಲ್ಲೂ ಸೊಗಸಾಗಿ ಕಂಡುಬಂತು.
ಕ್ಯಾಂಪಸ್ ಆವರಣದಲ್ಲಿ ಸಾಲು ಸಾಲು ರಂಗೋಲಿಗಳ ಆಕಾರ.. ಬಾಣಂಗಳದಲ್ಲಿ ಬಾಣ ಬಿರುಸುಗಳಿಂದಾದ ಆಕರ್ಷಕ ಚಿತ್ತಾರ.. ಅದಕ್ಕೆ ತಕ್ಕಂತೆ ವೇದಿಕೆಯಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಳನದ ವಯ್ಯಾರ.. ಹೀಗೆ ಮಿನಿಭಾರತವೇ ‘ಕರಾವಳಿ’ ಕಾಲೇಜ್ ಕ್ಯಾಂಪಸ್ ಆವರಣದಲ್ಲಿ ಅನಾವರಣವಾಯಿತು. ದೀಪಾವಳಿಯ ಶ್ರೀಮಂತಿಕೆಗೆ ಇಲ್ಲಿಯ ವಿದ್ಯಾರ್ಥಿಗಳು ಪರಿಪೂರ್ಣ ಅರ್ಥ ತುಂಬಿದರು..
‘ಕರಾವಳಿ’ ಎಂಬುದೇ ಸಾಂಸ್ಕೃತಿಕ ಸಿರಿವಂತಿಕೆಯ ಹೆಸರು..!
‘ಕರಾವಳಿ ಕಾಲೇಜ್’ ಎಂಬುದು ಒಂದು ಪರಿಪೂರ್ಣ ಶಿಕ್ಷಣ ಕಾಶಿ. ಪರ್ಯಾಯ ಯೂನಿವರ್ಸಿಟಿ ಎಂಬುದು ಇಲ್ಲಿ ಕಲಿತ ವಿದ್ಯಾರ್ಥಿಗಳ ಮನದಂಗಳದ ಹೆಮ್ಮೆಯ ಮಾತು. ಯಾಕೆಂದರೆ ವಿಶ್ವವಿದ್ಯಾಲಯಗಳನ್ನು ಮೀರಿಸುವ ಪಠ್ಯ-ಪಠ್ಯೇತರ ಚಟುವಟಿಕೆ ಮೂಲಕ ಪ್ರಬುದ್ಧರನ್ನಾಗಿಸುತ್ತೆ ಇಲ್ಲಿನ ವ್ಯವಸ್ಥೆ. ದೇಶದ ವಿವಿಧ ಭಾಗಗಳ, ವಿವಿಧ ಧರ್ಮ-ಸಮುದಾಯಗಳ ಮಂದಿ ವಿದ್ಯಾರ್ಥಿಗಳು ಇಲ್ಲಿ ಕಲಿತ ಬಳಿಕ ಪರಿಪೂರ್ಣ ಭಾರತೀಯ ಸಂಸ್ಕೃತಿಯನ್ನು ಅರಿತು-ಆಚರಿಸಿ ನಿರ್ಗಮಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿರುವುದು ಪ್ರತೀ ವರ್ಷದ ‘ಓಣಂ’, ‘ದೀಪಾವಳಿ’ ಸಹಿತ ಹಬ್ಬಗಳ ಆಚರಣೆ.
ಶ್ರೀ ‘ಗಣೇಶ’ ಎಂದರೆ ‘ಮುನ್ನುಡಿ’..!
ಶಿಕ್ಷಣ ಕ್ಷೇತ್ರದಲ್ಲಿ ಇಂಥದ್ದೊಂದು ಸಾಂಸ್ಕೃತಿಕ ಪ್ರಯೋಗ ನಡೆಸಬಹುದೆಂಬ ಪ್ರಕ್ರಿಯೆಗೆ ಮುನ್ನುಡಿ ಬರೆದವರೇ ‘ಗಣೇಶ’ ರಾವ್.
ಯಾವುದೇ ಅಚರಣೆ ಇರಲಿ, ಆರಂಭಕ್ಕೆ ಮುನ್ನ ಸ್ಮರಿಸುವುದು ‘ಗಣೇಶ’ನನ್ನು. ಇಲ್ಲೂ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆಯುವುದೇ ‘ಗಣೇಶ’ ರಾವ್. ದೇಶವು ದೀಪಾವಳಿಯ ಸಿದ್ದತೆಯಲ್ಲಿರಯವಾಗಲೇ, ಕರಾವಳಿ ಕಾಲೇಜು ಸಮೂಹದ ಮುಖ್ಯಸ್ಥರೂ ಆದ ಎಸ್.ಗಣೇಶ್ ರಾವ್ ಅವರು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿರುವ ಮಕ್ಕಳಿಗಾಗಿ ಅದ್ಧೂರಿ ‘ದೀಪಗಳ ಹಬ್ಬ’ವನ್ನೇ ಆಯೋಜಿಸಿದರು.
ಜಿ.ಆರ್.ಮೆಡಿಕಲ್ ಕಾಲೇಜ್, ಕರಾವಳಿ ಆಯುರ್ವೇದಿಕ್ ಕಾಲೇಜ್, ಕರಾವಳಿ ಫಾರ್ಮಸಿ ಕಾಲೇಜ್, ಕರಾವಳಿ ಇಂಜಿನಿಯರಿಂಗ್ ಕಾಲೇಜ್, ಕರಾವಳಿ ಪಾಲಿಟೆಕ್ನಿಕ್, ಕರಾವಳಿ ಮ್ಯಾನೇಜ್ಮೆಂಟ್ ಕಾಲೇಜ್, ಕರಾವಳಿ ಫ್ಯಾಷನ್ ಕಾಲೇಜ್, ಹೀಗೆ ಜಿ.ಆರ್.ಎಜುಕೇಶನ್ ಟ್ರಸ್ಟ್ ನಿರ್ವಹಿಸುತ್ತಿರುವ ವಿವಿಧ ಕಾಲೇಜ್ಗಳ ವಿದ್ಯಾರ್ಥಿಗಳು ತಾವು ಹಿಂದೆಂದೂ ಕಾಣದ ‘ಹಬ್ಬ ವೈಭವ’ದಲ್ಲಿ ಮಿಂದೆದ್ದರು.

◼ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೆಲ್ಲರೂ ಮಂಗಳೂರಿನ ಕೊಟ್ಟಾರದ ಕ್ಯಾಂಪಸ್ನಲ್ಲಿ ಒಗ್ಗೂಡಿ ಸಾಲು ಸಾಲು ದೀಪಗಳನ್ನು ಬೆಳಗಿಸಿ, ಹಬ್ಬ ಸಂಭ್ರಮವು ಪ್ರಜ್ವಳಿಸುವಂತೆ ಮಾಡಿದರು.
◼ ಹೆಂಗಳೆಯರು ಚಿತ್ತಾಕರ್ಷಕ ರಂಗೋಳಿ ಬಿಡಿಸಿ ದೀಪಾವಳಿಯ ವೈಭವವನ್ನು ಬಣ್ಣಗಳಲ್ಲಿ ಕೇಂದ್ರೀಕರಿಸಿದರು. ಕೆಲ ದಿನಗಳ ಹಿಂದಷ್ಟೇ ಓಣಂ ವೇಳೆ ಮಹಾಬಲಿಯನ್ನು ಆಹ್ವಾನಿಸುವ ಸನ್ನಿವೇಶವನ್ನು ರಂಗೋಳಿಯಲ್ಲಿ ತೋರಿಸಿದ್ದ ಕೈ ಬೆರಳುಗಳೇ, ಈ ಬಾರಿ ದೀಪಾವಳಿ ಸಂದರ್ಭದಲ್ಲಿ ‘ಬಲಿ ಚಕ್ರವರ್ತಿ’ ನಾಡಿಗೆ ಬಂದಾಗಿನ ಪೌರಾಣಿಕ ಪ್ರಸಂಗವನ್ನು ಬಿಂಬಿಸಿದರು.
◼ ಅಷ್ಟರಲ್ಲೇ ಪಟಾಕಿಗಳ ಸದ್ದು ಮಾರ್ಧನಿಸಿ, ಹಬ್ವದ ಸಡಗರದ ಸದ್ದನ್ನು ಹೆಚ್ಚಿಸಿತು. ಹಲವು ತಾಸುಗಳ ಕಾಲ ಬಾಣ ಬಿರುಸುಗಳು ಆಗಸದೆತ್ತರದಲ್ಲಿ ಚಿತ್ತಾರ ಬಿಡಿಸಿ ಎಲ್ಲರ ಕಣ್ಗಳನ್ನು ಸೂಜಿಗಲ್ಲಿನಂತೆ ಸೆಳೆದವು. ನಿಯಮಾನುಸಾರ ಹಸಿರು ಪಟಾಕಿಗಳ ಬಳಕೆಗಷ್ಟೇ ಹುಡುಗರು ತಮ್ಮ ಆಸಕ್ತಿಯನ್ನು ಕೇಂದ್ರೀಕರಿಸಿ ಇಲ್ಲಿನ ಶಿಸ್ತಿಗೆ ಉದಾಹರಣೆ ಎಂಬಂತಿದ್ದರು.
◼ ಇನ್ನೊಂದೆಡೆ, ಕಲಾಪ್ರತಿಭಾನ್ವಿತ ವಿದ್ಯಾರ್ಥಿ ಸಮೂಹದ ಯಕ್ಷಗಾನ ಕಲಾ ವೈಭವವೂ ಪುರಾಣ ಪ್ರಸಂಗಗಳನ್ನು ಸಾರುತ್ತಿದ್ದವು.
◼ ಸಿನಿಮಾ ಅಭಿರುಚಿಯುಳ್ಳ ಯುವಜನರಿಗೆ ಮುದ ನೀಡುವ ಹಾಡು, ಕುಣಿತಗಳಿಗೂ ಸುದೀರ್ಘ ಅವಕಾಶ ಇತ್ತು. ಸಿನಿಮಾ ದಿಗ್ಗಜರನ್ನೂ ಮೀರುವ ಸಕಲ-ಕಲಾ-ವಲ್ಲಭರ ನೃತ್ಯ-ರೂಪಕಗಳೂ ಮುದ ನೀಡಿದವು.
◼ ನಾಟ್ಯ ಶಾರದೆಯರ ಪ್ರತಿರೂಪ ಎಂಬಂತೆ ಭರತ ನಾಟ್ಯದಂತಹಾ ಕಲೆ ಪ್ರದರ್ಶನವೂ ಆಕರ್ಷಣೆಯಾಗಿತ್ತು.
◾ ಗುಜರಾತ್, ಕೇರಳ, ಪಂಜಾಬ್, ಬೆಂಗಾಳಿ ಸಹಿತ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ತಮ್ಮ ನಾಡಿನ ಸಂಸ್ಕೃತಿಕ ವೈಭವವನ್ನು ‘ಕರಾವಳಿ ದೀಪಾವಳಿ ವೇದಿಕೆ’ಯಲ್ಲಿ ಸಮ್ಮಿಳಿತಗೊಳಿಸಿದರು.
◼ ಮಾಡೆಲ್ ಚೆಲುವೆಯರನ್ನು ರೂಪಿಸುವ ಫ್ಯಾಷನ್ ಟೆಕ್ನಾಲಜಿ ವಿಭಾಗದ ಚೆಲುವೆಯರ ವಯ್ಯಾರವೂ ಈ ಸಡಗರಕ್ಕೆ ಆಕರ್ಷಣೆ ತುಂಬಿತು.
ಏನಿದು ‘ಕರಾವಳಿ ಹಬ್ಬ’?
‘ಕರಾವಳಿ ಕಾಲೇಜು ಸಮೂಹ’ದಲ್ಲಿ ಕರ್ನಾಟಕ ಮಾತ್ರವಲ್ಲ, ದೇಶ ವಿದೇಶಗಳ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ತಮ್ಮೂರಿಗೆ ಹೋಗುವ ಅವಕಾಶ ಅವರೆಲ್ಲರಿಗೂ ಸಿಗುವುದಿಲ್ಲ. ದೂರದೂರುಗಳಲ್ಲಿರುವ ತಮ್ಮ ಪರಿವಾರದ ಜೊತೆ ಸೇರಿ ಹಬ್ಬ ಆಚರಿಸುವ ಅವಕಾಶವೂ ಇರುವುದಿಲ್ಲ. ಇಂತಹಾ ವಿದ್ಯಾರ್ಥಿಗಳು ಹಬ್ಬಗಳ ಸಂಭ್ರಮದಿಂದ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಜಿ.ಆರ್.ಎಜುಕೇಶನ್ ಟ್ರಸ್ಟ್ನ ಮುಖ್ಯಸ್ಥರಾದ ಎಸ್.ಗಣೇಶ್ ರಾವ್ ಹಾಗೂ ಲತಾ ಜಿ.ರಾವ್ ಅವರು ಈ ವಿಶೇಷ ಹಬ್ಬಗಳ ಸಂದರ್ಭವನ್ನು ಸೃಷ್ಟಿಸುತ್ತಿದ್ದಾರೆ. ಈ ಬಾರಿಯೂ ಇವರು ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಿದರು. ತಾವೂ ಈ ಮಕ್ಕಳ ಬಂಧುಗಳಾಗಿ ಬೆರೆತು ಸಂಭ್ರಮಿಸಿದರು.