ದೊಡ್ಡಬಳ್ಳಾಪುರ: ತಾಲ್ಲೂಕಿನ ಕಂಟನಕುಂಟೆ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ಪ್ರತಿಷ್ಠಯ ಅಖಾಡವಾಗಿದ್ದ ಈ ಪಂಚಾಯತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಅಭ್ಯರ್ಥಿಗಳ ಪರಸ್ಪರ ಸ್ಪರ್ಧೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶೋಭ ರಾಜ್ ಗೋಪಲ್ 10 ಮತಗಳನ್ನು ಪಡೆದು ಜಯಶೀಲರಾದರು.ಅದರ ಜೊತೆ ಇದೆ ಪಕ್ಷದ ಅಭ್ಯರ್ಥಿ ನಾಗರಾಜು ಗೆಲುವಿನ ನಗೆ ಬೀರಿದರು.
ಇನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಶಾಸಕರಾದಂತಹ ವೆಂಕಟರಮಣಯ್ಯನವರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ.ಅದರಂತೆ ಅನುಸರಿಸಿ ಪಂಚಾಯತಿ ಭಾಗದಲ್ಲಿ ಇರುವ ಎಲ್ಲ ಗ್ರಾಮಗಳಿಗೆ ಬೇಟಿ ನೀಡಿ ಕುಂದು ಕೊರತೆಗಳನ್ನು ಆಲಿಸಿ ಜನರಿಗೆ ತಲುಪಬೇಕಾದ ಸೌಲಭ್ಯಗಳನ್ನು ಸಿಗುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ನೂತನ ಅಧ್ಯಕ್ಷರು ತಿಳಿಸಿದ್ದಾರೆ.