ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾಗಿದ್ದಾರೆ. ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಬೆಂಗಳೂರಿನ ವಸಂತನಗರ ಬಳಿಯ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಪುನಿತ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅವರ ಆಪ್ತರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಎಂದಿನಂತೆ ಜಿಮ್ ಕಸರತ್ತು ನಡೆಸುತ್ತಿದ್ದ ವೇಳೆ ಪುನೀತ್ ರಾಜ್ ಕುಮಾರ್ ಅವರು ಕುಸಿದು ಬಿದ್ದರು. ತೀವ್ರ ಎದೆನೋವಿನಿಂದಾಗಿ ಅವರು ಕುಸಿದು ಬಿದ್ದರು. ಈಗ ಅವರನ್ನು ಆಸ್ಪತ್ರೆಗೆದಾಖಲಿಸಲಾಯಿತಾದರೂ ಅವರು ವಿಧಿಯಾಟಕ್ಕೆ ಬಲಿಯಾದರು ಎಂದು ಅವರ ಆಪ್ತರು ದುಃಖ ಹಂಚಿಕೊಂಡಿದ್ದಾರೆ..