ರಾಮನಗರ: ಕನಕಪುರದಲ್ಲಿ ಇನ್ಫೋಸಿಸ್ ಫೌಂಡೇಶನ್ 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 100 ಹಾಸಿಗೆ ಸಾಮರ್ಥ್ಯದ ಹೆರಿಗೆ ಮತ್ತು ಮಕ್ಕಳ ಅರೋಗ್ಯ ಆಸ್ಪತ್ರೆ ಉದ್ಘಾಟನೆಗೊಂಡಿದೆ.
ಭಾನುವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥ ಸುನೀಲ್ ಕುಮಾರ್ ಧಾರೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಚಿವ ಸುಧಾಕರ್ ಭಾಗವಹಿಸಿದರು. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ ಕೆ ಸುರೇಶ್, ಎಂಎಲ್ಸಿ ಎಸ್ ರವಿ, ಇನ್ಫೋಸಿಸ್ ಫೌಂಡೇಶನ್ ನ ಶೃತಿ ಖುರಾನ ಮತ್ತಿತರರು ಉಪಸ್ಥಿತರಿದ್ದರು