ಬೆಂಗಳೂರು: ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿನ ದುರಂತದ ನಂತರ ಇಂದು ಕಲಬುರಗಿ ಜಿಲ್ಲೆ ಅಫ್ಜಲ್‌ಪುರ ತಾಲೂಕು ಆಸ್ಪತ್ರೆಯಲ್ಲೂ ಮತ್ತೊಂದು ಆಕ್ಸಿಜನ್ ಕೊರತೆಯಿಂದಾಗಿ ರೋಗಿಗಳ ಸಾವಿನ ಘಟನೆ ಸಂಭವಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸರಣಿ ದುರಂತಗಳ ಬಗ್ಗೆ ಪ್ರತಿಪಕ್ಷಗಳ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.
ಕಲಬುರಗಿಯ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ, ಈ ಸರಣಿ ದುರಂತ ಸರ್ಕಾರದ ನಿರ್ಲಕ್ಷ್ಯದಿಂದಲೇ ಸಂಭವಿಸುತ್ತಿದ್ದು ಇದಕ್ಕೆ ಸರ್ಕಾರವೇ ಹೊಣೆ ಎಂದು ಆರೋಪಿಸಿದ್ದಾರೆ. ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಪತ್ರ ಬರೆದರೆ ಕೊರೋನಾ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಅಂತಾರೆ ಎಂದು ಸರ್ಕಾರದ ವಿರುದ್ದ ಹಾಗೂ ಸಚಿವರ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ಈಗ ರೋಗಿಗಳ ಸರಣಿ ಸಾವಿನ ಘಟನೆಗಳು ಸಂಭವಿಸುತ್ತಿವೆ. ಸರಣಿ ಸಾವುಗಳು ಸಂಭವಿಸುತ್ತಿವೆ. ಈ ಸರ್ಕಾರಕ್ಕೆ ಇನ್ಬೆಷ್ಟು ಬಲಿ ಬೇಕು ಎಂದು ಕೈ ಶಾಸಕರು ಪ್ರಶ್ನಿಸಿದ್ದಾರೆ.