ರಾಯಚೂರು: ದೇವದುರ್ಗ ತಾಲ್ಲೂಕಿನ ತಂತಿಣಿ ಬ್ರಿಜ್ ಬಳಿ ಇರುವ ಕಾಗಿನೆಲೆ ಕನಕಗುರು ಪೀಠದ ಶಾಖಾ ಮಠದಲ್ಲಿ ನಡೆಯುತ್ತಿರುವ ” ಹಾಲುಮತ ವೃಭವ- 2021″ ಕಾರ್ಯಕ್ರಮ ನಾಡಿನ ಗಮನಸೆಳೆದಿದೆ.
ಟಗರುಜೋಗಿಗಳು, ಹೆಳವರು – ಕಾಡುಸಿದ್ದರ ಸಮಾವೇಶವನ್ನು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಉದ್ಘಾಟಿಸಿದರು.
ತಿಂತಿಣಿ ಬ್ರಿಜ್ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ,ಮೈಸೂರು ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಹೆಚ್.ಎಮ್.ರೇವಣ್ಣ, ಮಾಜಿ ಸಂಸದ ಕೆ.ವೀರುಪಾಕ್ಷಪ್ಪ, ಕುರುಬರ ಸಂಘದ ನಿರ್ದೇಶಕ ಕೆ ಶಾಂತಪ್ಪ ಡಾ.ಹೆಚ್.ಜಿ.ಲಕ್ಕಪ್ಪ ಗೌಡ ಸೇರಿದಂತೆ ಹಾಲುಮತ ( ಕುರುಬ) ಸಮಾಜದ ಹಲ ಮುಖಂಡರು ಭಾಗವಹಿಸಿದ್ದರು.