ಬೆಂಗಳೂರು: ಭಜರಂಗದಳದ ಕಾರ್ಯಕರ್ತ ಶಿವಮೊಗ್ಗದ ಹರ್ಷಾ ಹತ್ಯೆ ಘಟನೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಖಂಡಿಸಿದ್ದಾರೆ. ಖಟ್ಟಾ ಹಿಂದೂತ್ವವಾದಿ ನಾಯಕರೂ ಆಗಿರುವ ಸಿ.ಟಿ.ರವಿ ತನ್ನ ಸೈದ್ಧಾಂತಿಕ ಸಹವರ್ತಿ ಹರ್ಷಾ ಸಾವಿನ ಬಗ್ಗೆ ನೋವಿನ ನುಡಿಗಳನ್ನು ಹಂಚಿಕೊಂಡಿದ್ದಾರೆ.
ಸಂಘದ ಕಟ್ಟಾಳುವಾಗಿರುವ ಸಿ.ಟಿ.ರವಿ, ಇದೀಗ ತಮ್ಮ ಸಹ ಕಾರ್ಯಕರ್ತರಿಗೆ ಸಂದೇಶವೊಂದನ್ನು ರವಾನಿಸಿ ಗಮನಸೆಳೆದಿದ್ದಾರೆ. ಭಾರತ ಮಾತೆ ಹಾಗೂ ಹಿಂದೂ ಧರ್ಮದ ಬಗ್ಗೆ ಹೊಂಗನಸು ಹೊತ್ತಿದ್ದ ಹರ್ಷಾ ಇದೀಗ ನಮ್ಮನ್ನಗಲಿದ್ದಾನೆ. ಇಸ್ಲಾಂ ಮೂಲಭೂತವಾದಿಗಳ ಸಂಚಿನಿಂದಾಗಿ ಯವ್ವನದಲ್ಲೇ ಹುತಾತ್ಮನಾಗಿದ್ದಾನೆ ಎಂದಿರುವ ಅವರು, ಇದೀಗ ಬಡವಾಗಿರುವ ಹರ್ಷಾನ ಕುಟುಂಬ ಸದಸ್ಯರ ನೆರವಿಗೆ ನಿಲ್ಲೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಇದೇ ವೇಳೆ, ಹರ್ಷಾರ ತಾಯಿಗೆ ಆರ್ಥಿಕ ನೆರವು ನೀಡುವಂತೆಯೂ ಸಲಹೆ ನೀಡಿರುವ ಸಿ.ಟಿ.ರವಿ, ಹರ್ಷಾ ಅವರ ತಾಯಿಯ ಬ್ಯಾಂಕ್ ಖಾತೆಗಳ ವಿವರಗಳನ್ನೂ ಹಂಚಿದ್ದಾರೆ.
Young Harsha had big dreams for Bharata Mata and Hindu Dharma.
His life was unfortunately shortened by Islamic Fundamentalists.
Let us all contribute to the future of His Family 🙏#JusticeForHarsha pic.twitter.com/fl6AWgiyA7
— C T Ravi 🇮🇳 ಸಿ ಟಿ ರವಿ (@CTRavi_BJP) February 22, 2022