ಬೆಂಗಳೂರು: ‘ಜನಾಕ್ರೋಶ’ ಹಿನ್ನೆಲೆ ‘ಜನೋತ್ಸವ’ ರದ್ದುಪಡಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ನಿರ್ಧಾರದ ಬಗ್ಗೆ ವ್ಯಂಗ್ಯವಾಡಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಮಧ್ಯರಾತ್ರಿಯ ಯೂಟರ್ನ್ಗಳ ವೃತ್ತಾಂತಗಳು ರಾಜ್ಯ ಬಿಜೆಪಿ ಸರ್ಕಾರಕ್ಕೆ ಹೊಸದೇನೂ ಅಲ್ಲ. ಸರ್ಕಾರಿ ಕಚೇರಿಗಳಲ್ಲಿನ ಚಿತ್ರೀಕರಣ ವಿಷಯದಲ್ಲೂ ಸರ್ಕಾರ ಹೀಗೆಯೇ ಯೂಟರ್ನಾಗಿ ರಾತ್ರಿಯವರೆಗೂ ಕಾದಿತ್ತು. ಬಹುಶಃ ಈ ಸರ್ಕಾರಕ್ಕೆ ಜ್ಞಾನೋದಯವಾಗಲು ರಾತ್ರಿಯೇ ಆಗಬೇಕೇನೋ! ಜನೋತ್ಸವದ ಬದಲಾಗಿ ‘ಜನಾಕ್ರೋಶ’ದ ದರ್ಶನವಾಗಿದೆ ಎಂದು ವಿಶ್ಲೇಷಿದೆ.
ಮಧ್ಯರಾತ್ರಿಯ ಯೂಟರ್ನ್ಗಳ ವೃತ್ತಾಂತಗಳು @BJP4Karnataka ಸರ್ಕಾರಕ್ಕೆ ಹೊಸದೇನೂ ಅಲ್ಲ.
ಸರ್ಕಾರಿ ಕಚೇರಿಗಳಲ್ಲಿನ ಚಿತ್ರೀಕರಣ ವಿಷಯದಲ್ಲೂ ಸರ್ಕಾರ ಹೀಗೆಯೇ ಯೂಟರ್ನ್ಗಾಗಿ ರಾತ್ರಿಯವರೆಗೂ ಕಾದಿತ್ತು.ಬಹುಶಃ ಈ ಸರ್ಕಾರಕ್ಕೆ ಜ್ಞಾನೋದಯವಾಗಲು ರಾತ್ರಿಯೇ ಆಗಬೇಕೇನೋ!
ಜನೋತ್ಸವದ ಬದಲಾಗಿ #JanaAkrosha ದ ದರ್ಶನವಾಗಿದೆ ಈ ಸರ್ಕಾರಕ್ಕೆ.
— Karnataka Congress (@INCKarnataka) July 28, 2022

























































