ನವದೆಹಲಿ: ಮಂಗಳೂರಿನತ್ತ ಆಗಮಿಸುತ್ತಿದ್ದ ಹಡಗಿನ ನಡೆಸಿರುವುದು ಇರಾನ್ ಮೂಲದವರು. ಯೆಮೆನ್ನ ಹೌತಿ ಬಂಡುಕೋರರನ್ನು ಬೆಂಬಲಿಸಿ ಈ ದಾಳಿ ನಡೆದಿದೆ ಎಂದು ಅಮೆರಿಕ ಹೇಳಿದೆ. ಕೆಂಪು ಸಮುದ್ರದಲ್ಲಿ ಭಾರತದ ಧ್ವಜವುಳ್ಳ ಕಚ್ಚಾ ತೈಲ ಟ್ಯಾಂಕರ್ ಮೇಲೆ ಯೆಮೆನ್ನ ಹೌತಿ ಬಂಡುಕೋರರ ಪರವಾಗಿ ಡ್ರೋನ್ ದಾಳಿ ನಡೆದಿದೆ ಎಂದು ಅಮೆರಿಕ ಹೇಳಿದೆ.
ಶನಿವಾರ ರಾತ್ರಿ ಎರಡು ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿದೆ. ನಾರ್ವೇ ಧ್ವಜದ ಹೊಂದಿದ್ದ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿತ್ತು. ಅದು ಸ್ವಲ್ಪದರಲ್ಲೇ ಪಾರಾಗಿದೆ. ಅದೇ ಹೊತ್ತಿಗೆ ಎಂ/ವಿ ಸಾಯಿಬಾಬಾ ಹೆಸರಿನ ಗ್ಯಾಬನ್ ಒಡೆತನದ ಹಡಗಿನ ಮೇಲೂ ದಾಳಿ ನಡೆದಿದೆ.
ಹೌತಿ ಬಂಡುಕೋರರನ್ನು ಬೆಂಬಲಿಸುತ್ತಿರುವ ಇರಾನ್ ಈ ದಾಳಿ ನಡೆಸಿದ್ದು, ಹಮಾಸ್ ವಿರುದ್ಧ ಸಮರ ಸಾರಿರುವ ಇಸ್ರೇಲ್ ವಿರುದ್ಧ ಸೇಡು ತೀರಿಸುತ್ತಿರುವ ಹೌತಿ ಬಂಡುಕೋರರು ಕೆಂಪು ಸಮುದ್ರದ ಮೂಲಕ ಹೋಗುವ ಹಡಗುಗಳನ್ನು ಗುರಿಯಾಗಿಸಿದ್ದಾರೆ. ಅದೇ ಹೊತ್ತಿಗೆ ಆ ಸಮುದ್ರ ದಾರಿಯಲ್ಲಿ ಭಾರತದತ್ತ ಸಾಗುತ್ತಿದ್ದ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿದೆ ಎಂದು ಅಮೆರಿಕ ಹೇಳಿದೆ.