ಲಂಡನ್: ಭಾರತದ 76 ನೇ ಗಣರಾಜ್ಯೋತ್ಸವವವನ್ನು ಬ್ರಿಟಿಷ್ ನೆಲದಲ್ಲಿ ವಿಶಿಷ್ಠವಾಗಿ ಆಚರಿಸಲಾಯಿತು. ಲಂಡನ್‌ನ ಹೃದಯಭಾಗದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಲಂಡನ್‌ನ ಐಕಾನಿಕ್ ಟೌನ್ ಹಾಲ್‌ನಲ್ಲಿ ಈ ಕಾರ್ಯಕ್ರಮ ಗಮನಸೆಳೆಯಿತು, ಲಂಡನ್‌ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರು ಈ ಸಂಭ್ರಮಾಚರಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಾರ್ಯಕ್ರಮವನ್ನು ಆಯೋಜಿಸಿಸಿದ ಕೋವೆಂಟ್ರಿ ಲೇಬರ್ ಪಾರ್ಟಿಯ ಪ್ರಯತ್ನವನ್ನು ಅವರು ಶ್ಲಾಘಿಸಿದ್ದಾರೆ. ಟೌನ್ ಹಾಲ್‌ನಲ್ಲಿ 76ನೇ ಗಣರಾಜ್ಯೋತ್ಸವವನ್ನು ಆಚರಿಸಲು ಕೋವೆಂಟ್ರಿ ಲೇಬರ್ ಪಾರ್ಟಿಯ ಪ್ರಯತ್ನಕ್ಕಾಗಿ ನಾವು ಶ್ಲಾಘಿಸುತ್ತೇವೆ ಎಂದು ಪಾಟೀಲ್ ಹೇಳಿದರು.
ಈ ಕಾರ್ಯಮವು ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಸಂಬಂಧವನ್ನು ಬಲಗೊಳಿಸಿದೆ ಎಂದು ಡಾ.ನೀರಜ್ ಪಾಟೀಲ್ ಬಣ್ಣಿಸಿದ್ದಾರೆ. ಎರಡೂ ರಾಷ್ಟ್ರಗಳನ್ನು ಬಂಧಿಸುವ ಬಲವಾದ ಸಾಂಸ್ಕೃತಿಕ ಸಂಬಂಧವನ್ನು ಅವರು ಒತ್ತಿ ಹೇಳಿದರು. “ದೇವರು ಗ್ರೇಟ್ ಬ್ರಿಟನ್ ಮತ್ತು ಭಾರತವನ್ನು ಆಶೀರ್ವದಿಸಲಿ”, ಎರಡು ರಾಷ್ಟ್ರಗಳ ನಡುವಿನ ಸಮೃದ್ಧ ಭವಿಷ್ಯದ ಹಂಚಿಕೆಯ ಭರವಸೆಯನ್ನು ಪ್ರತಿಬಿಂಬಿಸಲಿ ಎಂದವರು ಆಶಿಸಿದರು.