ಮುಂಬೈ: ಆಭರಣ ಪ್ರಿಯರಿಗೆ ಇದು ನಿಜಕ್ಕೂ ಶಾಕಿಂಗ್ ಸುದ್ದಿ. ಚಿನಿವಾರ ಪೇಟೆಯಲ್ಲಿ ಆಭರಣ ಚಿನ್ನದ ಧಾರಣೆ ಮತ್ತೆ ಗಗನದತ್ತ ಮುಖ ಮಾಡಿದ್ದು ನಾಗರ ಪಂಚಮಿ ಆಚರಣೆಯ ಭಕ್ತಿ ಕೈಂಕರ್ಯದ ಸಂದರ್ಭದಲ್ಲೇ ಚಿನ್ನದ ದರ ಏರಿಕೆಯ ಸುದ್ದಿ ಕೇಳಿಬಂದಿದೆ.
ಚಿನ್ನದ ದರ ಮತ್ತೊಮ್ಮೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ದೇಶದಲ್ಲಿ 10 ಗ್ರಾಂ ಚಿನ್ನ ದರ 50,760 ರೂಪಾಯಿಗೆ ತಲುಪಿದೆ. ರಾಜಧಾನಿ ದೆಹಲಿಯಲ್ಲಿ 22 ಕ್ಯಾರಟ್ ಚಿನ್ನದ ದರ ಪ್ರತೀ 10 ಗ್ರಾಂಗೆ 49,560 ದಾಖಲಾದರೆ, 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 50,760 ರೂಪಾಯಿಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಈ ದರ ಸ್ವಲ್ಪ ಮಟ್ಟಿಗೆ ಕಡಿಮೆ ಇದ್ದು, 22 ಕ್ಯಾರಟ್’ನ 10 ಗ್ರಾಂ ಚಿನ್ನಕ್ಕೆ 48,110 ರೂಪಾಯಿ ಇದೆ. ಆದರೆ ಅಪರಂಜಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 52,480 ದರ ನಿಗದಿಯಾಗಿದ್ದು ದೆಹಲಿಗಿಂತಲೂ ಹೆಚ್ಚಿದೆ.
ಅಮೆರಿಕಾ-ಚೀನಾ ನಡುವಿನ ವ್ಯಾಪಾರ, ಕೊರೋನಾ ಬಿಕ್ಕಟ್ಟು ಅಂದರ್ಭದಲ್ಲಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದೆ. ಈ ಕಾರಣದಿಂದಾಗಿ ಈ ಚಿನ್ನದ ದರ ಏರಿಕೆಗೆ ಕಾರಣವಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.